

ಕೊಡಗು: ಬಿಳಿ ಬಣ್ಣದ ಗೂಬೆಯನ್ನು ಹಿಡಿದು ಅಕ್ರಮ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ವೀರಾಜಪೇಟೆ ಪಟ್ಟಣದಲ್ಲಿ ಬಂಧಿಸಲಾಗಿದೆ.
ಮಂಜೇಶ್ವರದ ಮಹಮದ್ ನಡುಬೈಲ್, ಅಬ್ದುಲ್ ಸತ್ತಾರ್, ದಕ್ಷಿಣ ಕನ್ನಡದ ಬಿ.ಶೇಕಬ್ಬ ಬಂಧಿತರು. ಈ ಮೂವರು ಬಿಳಿ ಗೂಬೆಯನ್ನು ಹಿಡಿದು ಕಾರಿನಲ್ಲಿ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆ ವೀರಾಜಪೇಟೆ ಸಿಐಡಿ ಪೊಲೀಸರು ಮತ್ತು ಅರಣ್ಯ ಸಂಚಾರಿ ದಳ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಗೂಬೆ ಸಾಗಾಟಕ್ಕೆ ಬಳಸಿದ್ದ ವ್ಯಾಗನರ್ ಕಾರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಳಿ ಗೂಬೆಗೆ ಬೇಡಿಕೆ ಇದ್ದು, ಕಾಳ ಸಂತೆಯಲ್ಲಿ ಆರೋಪಿಗಳು ಮಾರಾಟಕ್ಕೆ ಯತ್ನಿಸಿದ್ದರು.