

ಕಂಪಲಾಪುರ: ನಾನು ಹಾಲು ಒಕ್ಕೂಟದ ನಿರ್ದೇಶಕನಾದಾಗ ಪಿರಿಯಾಪಟ್ಟಣ ತಾಲೂಕಿನಲ್ಲಿ ಕೇವಲ 40 ಸಾವಿರ ಲೀ. ಹಾಲು ಪ್ರತಿನಿತ್ಯ ಉತ್ಪಾದನೆಯಾಗುತ್ತಿತ್ತು. ಅಧ್ಯಕ್ಷನಾದ ನಂತರ ಪ್ರತಿನಿತ್ಯ 2 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದೆ. ಅದರ ಕೀರ್ತಿ ಉತ್ಪಾದಕರಿಗೆ ಸಲ್ಲಬೇಕು ಎಂದು ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ಹೇಳಿದರು.
ಮಂಗಳವಾರ ಇಲ್ಲಿನ ಹಾಲಿ ಡೇರಿ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ರೈತರು ಡೇರಿಗೆ ನೀಡುವ ಪ್ರತಿ ಲೀ ಹಾಲಿಗೆ 25 ರೂ. ನಿಂದ 36 ರೂ.ಗೆ ಏರಿಸಿದ್ದು ನನ್ನ ಅವಧಿಯಲ್ಲೇ. ನೆರೆರಾಜ್ಯ ಗುಜರಾತ್ ಬಿಟ್ಟರೆ ಹಾಲು ಉತ್ಪಾದನೆಯಲ್ಲಿ ನಮ್ಮ ರಾಜ್ಯ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದರು.
ಹಾಲು ಉತ್ಪಾದಕರ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಮೈಸೂರಿನಲ್ಲಿ ಈಗಾಗಲೇ 13 ಕೋಟಿ ರೂ. ವೆಚ್ಚದಲ್ಲಿ 250 ಮಕ್ಕಳಿಗೆ ಅನುಕೂಲವಾಗುವಂತೆ ಸುಸಜ್ಜಿತ ಹಾಸ್ಟೆಲ್ ಸೌಲಭ್ಯ ಕಲ್ಪಿಸಲಾಗಿದ್ದು, ರೈತರು ವಾರ್ಷಿಕ 20 ಸಾವಿರ ರೂ.ಗಳನ್ನು ಎರಡು ಕಂತಿನಲ್ಲಿ ಪಾವತಿ ಮಾಡಬಹುದು ಎಂದರು.
ಒಂದು ವರ್ಷಕ್ಕೆ ಸೀಮಿತವಾದ ರಾಸು ವಿಮೆಯನ್ನು 3 ವರ್ಷಕ್ಕೆ ವಿಸ್ತರಿಸಲಾಯಿತು. ರೈತರು ಒಮ್ಮೆ ಹಣ ಕಟ್ಡಿದರೆ ಸಾಕು. ಹಾಗೆಯೇ ಹಾಲು ಉತ್ಪಾದಕರಿಗಾಗಿ ಇರುವ ಸರ್ಕಾರಿ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಗುಣಮಟ್ಟದ ಹಾಲು ಉತ್ಪಾದನೆ ಮಾಡಿ ಹೆಚ್ಚು ಲಾಭ ಗಳಿಸಿ ಎಂದರು.
ಟಿಎಪಿಸಿಎಂಎಸ್ ನಿರ್ದೇಶಕ ಕೆ.ಕುಮಾರ್ ಮಾತನಾಡಿದರು. ಸಿಇಒ ಕಿಶೋರ್ ಸಂಘದ ವಾರ್ಷಿಕ ವರದಿ ಮಂಡಿಸಿದರು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತೀ ಹೆಚ್ಚ ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಸಂಘಕ್ಕೆ ಅತೀ ಹೆಚ್ಚು ಹಾಲು ಸರಬರಾಜು ಮಾಡಿದವರನ್ನು ಸನ್ಮಾನಿಸಲಾಯಿತು.
ಡೇರಿ ಅಧ್ಯಕ್ಷ ಸ್ವಾಮಿ, ಉಪಾಧ್ಯಕ್ಷ ಶಿವಣ್ಣ, ವಿಸ್ತರಣಾಧಿಕಾರಿ ನಿಶ್ಚಿತ್, ಪಿಎಸಿಎಸ್ ಅಧ್ಯಕ್ಷ ಸಂತೋಷ್, ನಿರ್ದೇಶಕ ಲಕ್ಮ್ಮಣ್, ರವಿ, ನಾಗೇಗೌಡ, ನಂದಿನಿ, ಡಾ.ಸತೀಶ್, ಅಧ್ಯಕ್ಷ ಕೆ.ಸ್ವಾಮಿ, ಉಪಾಧ್ಯಕ್ಷ ಶಿವಣ್ಣ, ನಿರ್ದೇಶಕರಾದ ಕೃಷ್ಣೇಗೌಡ, ಕೆ.ಕೆ.ಸ್ವಾಮಿ ಚೆಲುವೇಗೌಡ, ಕಟ್ಜೆ ಜಯಣ್ಣ, ಕೃಷ್ಣ , ನಜೀಬ್, ಸಾಕಮ್ಮ, ಜಯಮ್ಮ, ಮುಖಂಡರಾದ ನಾಗೇಗೌಡ, ಪ್ರಕಾಶ್‌ಗೌಡ, ಕೆ.ಕುಮಾರ್, ಗಿರೀಶ್, ಲೋಕೇಶ್ ಇತರರಿದ್ದರು.