

ನೆಲಮಂಗಲ : ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಸಜ್ಜಿತ ಕಾಲೇಜು ಕಟ್ಟಡ ಹಾಗೂ ಆಡಿಟೋರಿಯಂ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಗೃಹ ನಿರ್ಮಾಣ ಮಂಡಳಿಯಿಂದ ವಿಶೇಷ ಅನುದಾನದಲ್ಲಿ ಕಾಲೇಜು ಕಟ್ಟಡ ಹಾಗೂ ಆಡಿಟೋರಿಯಂ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಸರ್ಕಾರಿ ಕಾಲೇಜಿಗೆ ಅಗತ್ಯ ಮೂಲಸೌಕರ್ಯ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ. ಗೃಹ ನಿರ್ಮಾಣ ಮಂಡಳಿಯ ಸುಮಾರು 6.5 ಕೋಟಿ ರೂಪಾಯಿ ವಿಶೇಷ ಅನುದಾನದಲ್ಲಿ ಸುಸಜ್ಜಿತ ಕಾಲೇಜು ಕಟ್ಟಡ ಹಾಗೂ ಆಡಿಟೋರಿಯಂ ಅನ್ನು 11 ತಿಂಗಳ ಕಾಲಾವಧಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಗುತ್ತಿಗೆದಾರರು ಗುಣಮಟ್ಟ ಕಾಯ್ದುಕೊಂಡು ಅಭಿವೃದ್ಧಿ ಕಾಮಗಾರಿ ಮಾಡಬೇಕು. ಗುಣಮಟ್ಟದಲ್ಲಿ ರಾಜೀ ಇಲ್ಲ. ಜತೆಗೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಯಾವುದೇ ಸಮಸ್ಯೆಗಳು ಹಾಗೂ ಕುಂದುಕೊರತೆಗಳು ಇದ್ದಲ್ಲಿ ನನ್ನ ಗಮನಕ್ಕೆ ಪರಿಹಾರ ಒದಗಿಸಲಾಗುವುದು ಎಂದರು.
ಶ್ರೀದಲ್ಲೇ ಗುದ್ದಲಿ ಪೂಜೆ: ಕಾಲೇಜಿನಲ್ಲಿ ಶುದ್ಧ ಕುಡಿಯುವ ನೀರಿನ ಟಕ ಹಾಗೂ ಶೌಚಗೃಹಕ್ಕೆ ಕಾಲೇಜು ಪ್ರಾಧ್ಯಾಪಕರು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಅನುದಾನ ಮೀಸಲಿರಿಸಿದ್ದು, ಕೆಲಸಕ್ಕೆ ಭೂಮಿ ಪೂಜೆ ಮಾಡಲಾಗುವುದು ಎಂದು ಶಾಸಕ ಶ್ರೀನಿವಾಸ್ ತಿಳಿಸಿದರು. ನಗರಸಭೆ ಅಧ್ಯಕ್ಷ ಎನ್.ಗಣೇಶ್, ಉಪಾಧ್ಯಕ್ಷ ಜಿ.ಆನಂದ್, ನಿಟಕಪೂರ್ವ ಅಧ್ಯೆ ಪೂರ್ಣಿಮಾಸುಗ್ಗರಾಜು, ಸದಸ್ಯ ನರಸಿಂಹಮೂರ್ತಿ, ಬಿಎಂಟಿಸಿ ನಿರ್ದೇಶಕ ಮಿಲ್ಟಿ$ಮೂರ್ತಿ, ಗ್ರಾಮಪಂಚಾಯಿತಿ ಸದಸ್ಯ ಜಗದಾಂಬಾ, ಮಾಜಿ ಸದಸ್ಯೆ ಅಶ್ವಥಮ್ಮ, ಮುಖಂಡರಾದ ಎಂ.ಕೆ.ನಾಗರಾಜು, ಲ್ಮನಾರಾಯಣ್, ಗುರುದೀಪು, ಸಿ.ಎಂ.ಗೌಡ, ಚಿಕ್ಕಹನುಮೇಗೌಡ, ಲ್ಮಕಾಂತ್, ರವಿಕುಮಾರ್, ಮಂಜುನಾಥಯ್ಯ ಉಪಸ್ಥಿತರಿದ್ದರು.