ಅಬ್ಬಬ್ಬಾ! ಈ ಗಜಗಾತ್ರದ ನಿಂಬೆಹಣ್ಣು ಕಂಡು ಹುಬ್ಬೇರಿಸಿದ ಮೈಸೂರು ಮಂದಿ, ಇದರ ತೂಕ ಕೇಳಿದ್ರೆ ಶಾಕ್​ ಆಗ್ತೀರಿ

nimehannu 1
Published on

ಮೈಸೂರು: ಒಂದು ನಿಂಬೆಹಣ್ಣಿನ ಗಾತ್ರ ಎಷ್ಟಿರುತ್ತೆ? ಹೆಚ್ಚೆಂದ್ರೆ 200 ಗ್ರಾಂ?... ಹೌದು ಸಾಮಾನ್ಯವಾಗಿ ಎಲ್ಲರೂ ಹೀಗೆ ಅಂದುಕೊಂಡಿರ್ತಾರೆ. ಆದರೆ ಮೈಸೂರಿನಲ್ಲಿ ಒಂದು ನಿಬ್ಬೆಯ ಗಾತ್ರ ಬರೋಬ್ಬರಿ 2 ಕೆಜೆ 150 ಗ್ರಾಂ!

ಹೌದು, ಇದು ಅಚ್ಚರಿ ಅನ್ನಿಸಿದರೂ ಸತ್ಯ. ಬಿದರಹಳ್ಳಿ ಸರ್ಕಲ್‌ ಬಳಿ ಸನೋಜ್ ಎಂಬುವರ ಮನೆಯ ಹಿತ್ತಲಿನಲ್ಲಿರುವ ನಿಂಬೆ ಗಿಡದಲ್ಲಿ ಒಟ್ಟು ಮೂರು ನಿಂಬೆ ಹಣ್ಣು ಬಿಟ್ಟಿದೆ. ಈ ಪೈಕಿ ಒಂದರ ಗಾತ್ರ ಬೃಹತ್​ ಇದ್ದು, 2 ಕೆಜಿ ‌150 ಗ್ರಾಂ ತೂಕ ಇದೆ. ಅಪರೂಪದ ನಿಂಬೆಹಣ್ಣನ್ನು ನೋಡಿ ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ಈ ನಿಂಬೆಹಣ್ಣಿನ ಹೆಸರು ಪರ್ಷಿಯನ್ ಲೈಮ್. ಇದು ವಿದೇಶಿ ತಳಿಯ ಗಿಡ. ಸ್ಥಳೀಯವಾಗಿ 2 ಕೆಜಿಗೆ 40ರಿಂದ 70 ನಿಂಬೆ ಹಣ್ಣು ಬರುತ್ತೆ. ಆದರೆ, ಈ ಒಂದು ನಿಂಬೆಹಣ್ಣು 2 ಕೆಜೆಗೂ ಅಧಿಕ ಇರುವುದನ್ನು ಕಂಡು ಸ್ಥಳೀಯರು ಬೆರಗಾಗಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net