

ಆನೇಕಲ್: ಬನ್ನೇರುಟ್ಟ ಜೈವಿಕ ಉದ್ಯಾನವನದಲ್ಲಿ ಮಂಗಳವಾರ ಹುಲಿ ಸಂರಕ್ಷಣೆ ಕುರಿತಂತೆ ಅರಿವಿನ ಗುರಿ ಹೊಂದಿರುವ ವನ್ಯಜಿವಿ ಸಂರಕ್ಷಣಾ ಇಲಾಖೆ, ಆಕರ್ಷಕ ಮತ್ತು ಶೈಕ್ಷಣಿಕ ಚಟುವಟಿಕೆಗಳ ಸರಣಿಯೊಂದಿಗೆ ಅಂತಾ ರಾಷ್ಟ್ರೀಯ ಹುಲಿ ದಿನ ಆಚರಿಸಲಾಯಿತು.
ಹುಲಿ ಪಗ್ಮಾರ್ಕ್ಗಳು, ಕ್ಯಾಮರಾ ಟ್ರಾ$್ಯಪ್ ಮತ್ತು ಪಟ್ಟೆ ಮಾದರಿ ಚಿತ್ರ ಬಳಸಿಕೊಂಡು ಹುಲಿ ಗುರುತಿಸುವಿಕೆ ಪ್ರದರ್ಶಿಸುವ ಸಂವಾದಾತ್ಮಕ ಟಚ್ ಟೇಬಲ್ನೊಂದಿಗೆ ಪ್ರವಾಸಿಗರಿಗೆ ಮಾಹಿತಿ ನೀಡಲಾಯಿತು.
ಸ್ವಯಂಸೇವಕರು, ಸಾರ್ವಜನಿಕರೊಂದಿಗೆ ಹುಲಿ ಜೀವಶಾಸ, ನಡವಳಿಕೆ, ಹುಲಿಗಳ ಪರಿಸರದ ಮಹತ್ವ ಮತ್ತು ಸಂರಕ್ಷಣಾ ಪ್ರಯತ್ನಗಳ ಬಗ್ಗೆ ಅಮೂಲ್ಯವಾದ ಒಳನೋಟ ಹಂಚಿಕೊಂಡರು. ಅನುಷ್ಕಾ ಹುಲಿಗಾಗಿ ಮೃಗಾಲಯದಲ್ಲಿ ವಿಶೇಷ ಪುಷ್ಟೀಕರಣ ಚಟುವಟಿಕೆ ಆಯೋಜಿಸಲಾಯಿತು. ಹುಲಿ ಸಂರಕ್ಷಣೆ ಜತೆಗೆ ಜೀವವೈವಿಧ್ಯದ ಮಹತ್ವ ತೋರಿಸುವ ಪಟ್ಟೆ, ಸರಳ ಮತ್ತು ನೀಲಿ ಹುಲಿ, ಚಿಟ್ಟೆ ಉದ್ಯಾನದಲ್ಲಿ ಚಿಟ್ಟೆಗಳನ್ನು ಬಿಡುಗಡೆ ಮಾಡುವುದು ಒಳಗೊಂಡಂತೆ ಪ್ರವಾಸಿಗರಿಗೆ ಮಾರ್ಗದರ್ಶಿ ಪ್ರವಾಸ ಆಯೋಜಿಸಲಾಗಿತ್ತು. ಪ್ರವಾಸಿಗರು ಮತ್ತು ಮಕ್ಕಳನ್ನು ಹುಲಿಯ ಫೇಸ್ ಪೇಟಿಂಗ್ ಮೂಲಕ ಆಕರ್ಷಿಸಲಾಯಿತು.
ವನ್ಯಜಿವಿ ಸಂರಕ್ಷಣೆಯಲ್ಲಿ ಸಾರ್ವಜನಿಕ ಭಾಗವಹಿಸುವಿಕೆ ಉತ್ತೇಜಿಸಲು ದೇಣಿಗೆ ಅಭಿಯಾನ ನಡೆಸಲಾಯಿತು. ಹುಲಿ ದಿನದ ಅಂಗವಾಗಿ ವಿವಿಧ ರೀತಿಯ ಕಾರ್ಯಕ್ರಮ ನಡೆಸಿಕೊಡಲಾಯಿತು. ಜನರ ಅರಿವಿಗಾಗಿ ವಿವಿಧ ಶಾಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಹಾಗೂ ಪಾರ್ಕ್ಗೆ ಆಗಮಿಸಿದ ಪ್ರವಾಸಿಗರಲ್ಲಿ ಹುಲಿ ಜೀವನ ಶೈಲಿ ತಿಳಿಸಿಕೊಡಲಾಯಿತು.