ದೇಶ ಸೇವೆ ಮುಗಿಸಿ ಬಂದ ಯೋಧಗೆ ಆತ್ಮೀಯ ಸ್ವಾಗತ

1 RPT 1.
ನಿವೃತ್ತ ಯೋಧ ಬೂದ್ಯಪ್ಪಗೌಡ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಎಂ.ಬಿ.ಲಕ್ಷ್ಮಣಗೌಡ, ಎಂ.ಎಂ.ಪರಮೇಶ, ತೇಜಮೂರ್ತಿ ಇತರರಿದ್ದರು.
Published on

ರಿಪ್ಪನ್‌ಪೇಟೆ: ಸುದೀರ್ಘ 40 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ತವರೂರಿಗೆ ಆಗಮಿಸಿದ ಯೋಧ ಕಲ್ಲೂರು ಬೂದ್ಯಪ್ಪ ಗೌಡ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ರಿಪ್ಪನ್‌ಪೇಟೆಗೆ ಆಗಮಿಸುತ್ತಿದ್ದಂತೆ ನೂರಾರು ಮಂದಿ ಒಗ್ಗೂಡಿ ಪ್ರೀತಿಯಿಂದ ಸ್ವಾಗತಿಸಿದರು. ಜಯಘೋಷ ಕೂಗುತ್ತ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಿಂದ ವಿನಾಯಕ ವೃತ್ತದವರೆಗೆ ಮೆರವಣಿಗೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ನಿವೃತ್ತ ಯೋಧ ಬೂದ್ಯಪ್ಪಗೌಡ ಮಾತನಾಡಿ, ಕಾಶ್ಮೀರದಿಂದ ಕನ್ಯಾಕುಮಾರಿ, ರಾಜಸ್ಥಾನದಿಂದ ಮಣಿಪುರದವರೆಗಿನ ಎಲ್ಲ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ನಿವೃತ್ತಿ ನಂತರ ಹುಟ್ಟೂರಿಗೆ ಆಗಮಿಸಿದಾಗ ನನ್ನೂರಿನ ಜನ ತೋರಿಸುತ್ತಿರುವ ಅತೀವ ಅಭಿಮಾನದಿಂದ ನಾನೊಂದು ಅತಿದೊಡ್ಡ ಸಹಾಸ ಮಾಡಿದ್ದೇನೆ ಎಂಬ ಅರಿವು ಈಗ ನನಗೆ ಆಗುತ್ತಿದೆ. ನಿವೃತ್ತಿ ನಂತರವೂ ಜನಸೇವೆಯೇ ದೇಶಸೇವೆ ಎಂದು ಪರಿಗಣಿಸಿ ಕಾರ್ಯತತ್ಪರನಾಗುವ ಮೂಲಕ ಈ ನಾಡಿಗೆ ಋಣಿಯಾಗಿರುತ್ತೇನೆ ಎಂದು ಹೇಳಿದರು. ಮುಖಂಡರಾದ ಎಂ.ಬಿ.ಲಕ್ಷ್ಮಣಗೌಡ, ಎಂ.ಎಂ.ಪರಮೇಶ, ಕಲ್ಲೂರು ತೇಜಮೂರ್ತಿ, ವಾಸಪ್ಪ ಗೌಡ, ಶಿವಪ್ಪ, ತಾನಾರಾಮ್, ಹರೀಶ, ಎಂ.ಬಿ.ಮಂಜುನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net