ನಿವೃತ್ತ ಯೋಧನಿಗೆ ಅದ್ದೂರಿ ಸ್ವಾಗತ

A warm welcome to the retired soldier
ಬಾಗಲಕೋಟೆ ರೈಲ್ವೆ ನಿಲ್ದಾಣದಲ್ಲಿ ವಿಜಯ ಪೀರಪ್ಪ ರಾಠೋಡ ಅವರನ್ನು ಬರಮಾಡಿಕೊಳ್ಳಲಾಯಿತು. ಜಿಲ್ಲಾ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಗೌರವ ಅಧ್ಯಕ್ಷ ಅರ್ಜುನ ಕೋರಿ, ಜಿಲ್ಲಾಧ್ಯಕ್ಷ ಗದಿಗೆಪ್ಪ ಅರಕೇರಿ, ಪದಾಧಿಕಾರಿಗಳಾದ ಶಂಕ್ರಪ್ಪ ಬಾರಕೇರ, ರವಿದಾಸ ಲಮಾಣಿ, ಚಂದು ಲಮಾಣಿ, ವೇಗಾನಂದ ಕಲ್ಲೊಳ್ಳಿ ಇತರರು ಇದ್ದರು.
Published on

ಬಾಗಲಕೋಟೆ: ಭಾರತೀಯ ಸೇನಾಪಡೆಯಲ್ಲಿ 21 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ತವರಿಗೆ ಮರಳಿದ ಬೀಳಗಿ ತಾಲೂಕಿನ ಸಿದ್ದಾಪುರ ಎಲ್‌ಟಿ ಗ್ರಾಮದ ಹವಾಲ್ದಾರ ವಿಜಯ ಪೀರಪ್ಪ ರಾಠೋಡ ಅವರನ್ನು ನಗರದ ರೈಲ್ವೆ ನಿಲ್ದಾಣದಲ್ಲಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ವಿಜಯ ರಾಠೋಡ ಭಾರತೀಯ ಸೇನೆಯ 143 ಮೆಡಿಯಮ್ ಆರ್ಟಿ ರೆಜಿಮೆಂಟಿನಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದು, ರೈಲಿನ ಮೂಲಕ ಬಾಗಲಕೋಟೆ ನಗರಕ್ಕೆ ಆಗಮಿಸಿದಾಗ ನಿಲ್ದಾಣದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತು ನರೇಂದ್ರ ಯುವಕ ಮಂಡಳಿ ಸದಸ್ಯರು ಆದರದಿಂದ ಸ್ವಾಗತಿಸಿದರು. ನಂತರ ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು. ಬಸವೇಶ್ವರ ಪುತ್ಥಳಿಗೆ ಪುಷ್ಪ ಮಾಲೆ ಅರ್ಪಿಸಲಾಯಿತು.

ಜಿಲ್ಲಾ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಗೌರವ ಅಧ್ಯಕ್ಷ ಅರ್ಜುನ ಕೋರಿ, ಜಿಲ್ಲಾಧ್ಯಕ್ಷ ಗದಿಗೆಪ್ಪ ಅರಕೇರಿ, ಪದಾಧಿಕಾರಿಗಳಾದ ಶಂಕ್ರಪ್ಪ ಬಾರಕೇರ, ರವಿದಾಸ ಲಮಾಣಿ, ಚಂದು ಲಮಾಣಿ, ವೇಗಾನಂದ ಕಲ್ಲೊಳ್ಳಿ, ಮೇಮನ ಹಳೆಮನಿ, ಮಹಾಂತೇಶ ಗಸ್ತಿಮಠ, ಯಲ್ಲಪ್ಪ ಕಡೆಮನಿ, ಬಸವರಾಜ ಬಾಗೇವಾಡಿ, ಮಂಜುನಾಥ ಮನಗೂಳಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net