ನಿವೃತ್ತ ಸೈನಿಕಗೆ ಅದ್ದೂರಿ ಸ್ವಾಗತ

Yodha hkr
Published on

ಹಿರೇಕೆರೂರ: ಭಾರತೀಯ (ಬಿಎಸ್‌ಎಫ್) ಸೇನೆಯಲ್ಲಿ ಸೈನಿಕನಾಗಿ 25 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ, ಹುಟ್ಟೂರಿಗೆ ಮರಳಿದ ಸೈನಿಕ ರಾಜು ನಾಗಪ್ಪ ಅಣಗೊಂಡರ ಅವರನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸ್ವಾಗತಿಸಲಾಯಿತು.

ನಂತರ ಪೇಟೆ ಬಸವೇಶ್ವರ ದೇವಸ್ಥಾನದ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಟ್ಟಣದ ನಾಗರಿಕರು, ತಹಸೀಲ್ದಾರ್, ವಿವಿಧ ಸಮಾಜ, ಸಂಘ, ಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಯಿತು.

ತಹಸೀಲ್ದಾರ್ ಡಾ.ಪ್ರಭಾಕರಗೌಡ ಎಚ್., ತಾಲೂಕು ಬಿಜೆಪಿ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ಪಪಂ ಮಾಜಿ ಅಧ್ಯಕ್ಷ ಕಂಠಾಧರ ಅಂಗಡಿ, ಸದಸ್ಯರಾದ ಗುರುಶಾಂತ ಎತ್ತಿನಹಳ್ಳಿ, ಹರೀಶ ಕಲಾಲ, ರಮೇಶ ಕೋಡಿಹಳ್ಳಿ, ಸನಾವುಲ್ಲಾ ಮಕಾಂದರ, ಮದ್ವಿರೆಶೈವ ಮಹಾ ಸಮಾಜದ ಚನ್ನವೀರಪ್ರಭು ಕುಬಸದ, ಬಾಬು ಅಣಗೊಂಡರ, ಈರಣ್ಣ ಹಳ್ಳೂರ, ಶಿವಯೋಗಿ ಕಾಯಕದ, ರಾಜು ತಿಪ್ಪಶೆಟ್ಟಿ, ಮುಖಂಡರಾದ ರುದ್ರೇಶ ಬೇತೂರ, ಅನಿಲ ಹಲವಾಗಿಲ್, ಜಗದೀಶ ದೊಡ್ಡಗೌಡ್ರ, ಜಗದೀಶ ಕಲ್ಯಾಣಿ, ಶಂಕರ ತಿರಕಪ್ಪನವರ, ಅರುಣ ಅಣಗೊಂಡರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net