ಭವನಕ್ಕೆ ಹಿಡಿದ ಗ್ರಹಣ ಪರಿಹಾರ

mkg
Published on

ಜಗಳೂರು: ಇಲ್ಲಿನ ಎನ್‌ಜಿಒ ಬಡಾವಣೆಯ ಡಾ.ಬಿ.ಆರ್. ಅಂಬೇಡ್ಕರ್ ಶಾಲೆ ಸಮೀಪದಲ್ಲಿರುವ ಸಾಂಸ್ಕೃತಿಕ ಭವನದಲ್ಲಿ ದಾಸ್ತಾನು ಮಾಡಿದ್ದ ಸಿಮೆಂಟ್ ಚೀಲ ಇತರೆ ಸಾಮಗ್ರಿಗಳನ್ನು ಶನಿವಾರ ತೆರವುಗೊಳಿಸಲಾಯಿತು.

ಭವನವನ್ನು ಕಳೆದ ಹನ್ನೆರಡು ವರ್ಷಗಳಿಂದ ಗುತ್ತಿಗೆದಾರರು ಗೋದಾಮು ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಆ.11ರಂದು ವಿಜಯವಾಣಿ ಪತ್ರಿಕೆಯಲ್ಲಿ ‘ಸಾಂಸ್ಕೃತಿಕ ಭವನಕ್ಕೆ ಹಿಡಿದ ಗ್ರಹಣ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.

ಇದರಿಂದ ಎಚ್ಚೆತ್ತ ಅಧಿಕಾರಿಗಳು, ಕನ್ನಡಪರ ಸಂಘಟನೆಗಳು, ಅಭಿಮಾನಿಗಳು ಗುತ್ತಿಗೆದಾರನ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ, ಕೂಡಲೇ ತೆರವುಗೊಳಿಸುವಂತೆ ಆಗ್ರಹಿಸಿದರು.

ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಗುತ್ತಿಗೆದಾರನಿಗೆ ತಕ್ಷಣ ಸಿಮೆಂಟ್ ತೆರವುಗೊಳಿಸುವಂತೆ ಎಚ್ಚರಿಕೆ ನೀಡಿದ್ದರು. ಹಾಗಾಗಿ, ಶನಿವಾರ ಸಂಜೆ ಆಟೋಗಳಲ್ಲಿ ಸಿಮೆಂಟ್ ಚೀಲಗಳನ್ನು ಸ್ಥಳಾಂತರಿಸಲಾಯಿತು.

ದಶಕಗಳ ಕಾಲ ಸಾಂಸ್ಕೃತಿಕ ಭವನವನ್ನು ಸಿಮೆಂಟ್ ಚೀಲ ಇಡಲು ಬಳಸಿದ್ದರಿಂದ ಭವನ ಸಂಪೂರ್ಣ ಹಾಳಾಗಿದೆ. ಹಾಗಾಗಿ, ಸಾಂಸ್ಕೃತಿಕ ಭವನ ಸ್ವಚ್ಛಗೊಳಿಸಿ, ಸುಣ್ಣ, ಬಣ್ಣ ಬಳಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ದಸಂಸ ಸಂಚಾಲಕ ಮಲೆಮಾಚಿಕೆರೆ ಸತೀಶ್ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net