ಹೈಕೋರ್ಟ್​ನಲ್ಲಿ ಹಿಜಾಬ್​ ಬ್ಯಾನ್​, ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸುತ್ತೇವೆ: ವಕ್ಫ್​ ಬೋರ್ಡ್​ ಅಧ್ಯಕ್ಷ

New Project(20)
Published on

ಬೆಂಗಳೂರು: ಮುಸ್ಲಿಂ ಹೆಣ್ಣುಮಗಳು ಮನೆಯಿಂದ ಹೊರಗಡೆ ಹೋಗುವಾಗ ಹಿಜಾಬ್​ ಅನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಪವಿತ್ರ ಕುರಾನ್​ನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ನ್ಯಾಯಾಲಯದಲ್ಲಿ ನಮ್ಮ ವಕೀಲರು ವಾದ ಮಂಡನೆಯಲ್ಲಿ ಎಡವಿದ್ದರೆ, ಹಿಜಾಬ್​ ವಿಚಾರವಾಗಿ ವಿರುದ್ಧ ತೀರ್ಪು ಬಂದಿದ್ದರೆ ನಾವು ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ವಕ್ಫ್​ ಬೋರ್ಡ್​ ಅಧ್ಯಕ್ಷ ಮೌಲಾನಾ ಶಫಿ ಶಾ-ಆದಿ ಹೇಳಿದ್ದಾರೆ.

ಹಿಜಾಬ್​ ಪರ ಸಲ್ಲಿಕೆಯಾದ 11 ಅರ್ಜಿಗಳನ್ನೂ ವಜಾ ಮಾಡಿದ ಹೈಕೋರ್ಟ್​ ಪೂರ್ಣ ಪೀಠ, ಶಾಲಾ-ಕಾಲೇಜುಗಳಲ್ಲಿ ಹಿಜಾಬ್​ಗೆ ಅವಕಾಶವಿಲ್ಲ. ​ಸಮವಸ್ತ್ರ ನೀತಿ ಪಾಲಿಸಬೇಕು ಎಂದು ಇಂದು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಈ ಕುರಿತು ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿದ ಮೌಲಾನಾ ಶಫಿ ಶಾ-ಆದಿ, ಹಿಜಾಬ್​ ವಿಚಾರದಲ್ಲಿ ಸಾಕಷ್ಟು ವಿವಾದ ಎದ್ದಿತ್ತು. ಇಂದು ತೀರ್ಪಿನ ಕುರಿತಂತೆಯೂ ಧರ್ಮದ ವಿದ್ವಾಂಸರ ಜತೆ ಚರ್ಚೆ ನಡೆಸಿದ್ದೇವೆ. ಹೈಕೋರ್ಟ್​ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸುತ್ತೇವೆ. ಸಮುದಾಯದ ಧಾರ್ಮಿಕ ಮುಖಂಡರು, ವಕ್ಫ್​ ಬೋರ್ಡ್​ನಲ್ಲಿ ಹಿಜಾಬ್​ ಕುರಿತು ತೀರ್ಪು ಬಂದ ಮೇಲೆ ಏನು ಮಾಡಬೇಕು ಎಂದು ನಾವು 10 ದಿನದಿಂದ ಚರ್ಚಿಸಿದ್ದೇವೆ. ಯಾವುದೇ ತೀರ್ಪು ಕೊಟ್ಟರೂ ಎಲ್ಲರೂ ಶಾಂತಿಯಿಂದ ಇರಬೇಕು ಎಂದು ಉಲೆಮಾಗಳ ಮೂಲಕ ಈಗಾಗಲೇ ನಮ್ಮ ಸಮುದಾಯಕ್ಕೆ ಸಂದೇಶ ಕೊಟ್ಟಿದ್ದೇವೆ. ನಮ್ಮ ಸಮುದಾಯದಲ್ಲಿ ಬಾಲಕಿಯರ ಶಿಕ್ಷಣ ಉತ್ತಮವಾಗಿಸಲು ನಾವು ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂದೂ ಯೋಚಿಸಿದ್ದೇವೆ ಎಂದರು.

Koo App
Hijab is not an essential practice of Islam and can’t be allowed in schools and colleges, rules Karnataka High Court. I welcome the judgment as it upholds the sanctity of uniforms and brings the focus in schools and colleges back on education. #HijabControversy #Hijab #Karnataka
View attached media content
-Dr. Sudhakar K (@drsudhakark.official)15 Mar 2022
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net