

ವಿಜಯಪುರ: ಮಾನವ ಸಂಕಟ ಮತ್ತು ದು@ಖಗಳಿಗೆ ಬಸವಣ್ಣನವರ ವಚನಗಳಲ್ಲಿ ಪರಿಹಾರ ಸಿಗುತ್ತದೆ ಎಂದು ಸಾಹಿತಿ, ಮಹಿಳಾ ವಿವಿ ಸಿಂಡಿಕೇಟ್ ಸದಸ್ಯ ಡಾ. ಎಸ್. ನಟರಾಜ ಬೂದಾಳು ಹೇಳಿದರು.
ನಗರ ಹೊರವಲಯದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಸಾಂಸತಿಕ ನಾಯಕ, ವಿಶ್ವಗುರು ಬಸವೇಶ್ವರರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
ಬಸವಣ್ಣನವರ ವಚನಗಳಲ್ಲಿ ಸಾಮಾಜಿಕ ಚಿಂತನೆ ಮುಖ್ಯ ಉದ್ದೇಶವಾಗಿತ್ತು. ಈ ಉದಾತ್ತ ಉದ್ದೇಶ ಬುದ್ಧನಲ್ಲಿಯೂ ಹಾಗೂ ಡಾ. ಅಂಬೇಡ್ಕರ್ ಅವರಲ್ಲಿಯೂ ಕಾಣಬಹುದು. ಬಸವಣ್ಣ ಕೇವಲ ಶರಣನಲ್ಲ, ವ್ಯಕ್ತಿಯಲ್ಲ ಅವರು ಒಂದು ವಿದ್ಯಮಾನ. ಅವರು ಹೆಣ್ಣು ಮಕ್ಕಳ ಧಾರ್ಮಿಕ ೇತ್ರದ ನಿರಾಕರಣೆ, ಜಾತಿ&ಲಿಂಗ ಭೇದದ ವಿರುದ್ಧ ಹೋರಾಟ, ಅಸ್ಪಶ್ಯತೆಯ ನಿರಾಕರಣೆ ಮತ್ತು ಬಾಹ್ಯಾಚಾರದ ತಿರಸ್ಕಾರಕ್ಕೆ ಒತ್ತಡ ಕೊಟ್ಟು ಒಂದು ಶ್ರೇಷ್ಠ ಸಾಮಾಜಿಕ ಚಳವಳಿಗೆ ಉತ್ತೇಜನ ನೀಡಿದರು ಎಂದು ತಿಳಿಸಿದರು.
ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಬಸವಣ್ಣನವರು 12ನೇ ಶತಮಾನದಲ್ಲಿ ಸಿ ಸಮಾನತೆಗಾಗಿ ಹೋರಾಟ ಮಾಡಿ ಮಹಿಳಾ ವಿವಿ ಸ್ಥಾಪನೆಗೆ ಕಾರಣರಾದರು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ. ಮಾತನಾಡಿ, ಯುವಜನತೆ ಬಸವಣ್ಣನವರ ವಚನಗಳನ್ನು ಓದಿ ವೈಚಾರಿಕ ಮನೋಭಾವ ಬೆಳೆಸಿಕೊಳ್ಳಬೇಕು. ಅವು ಮಾನವೀಯ ಮೌಲ್ಯಗಳ ಬೆಳವಣಿಗೆಗೆ ದಾರಿ ತೋರಿಸುತ್ತವೆ ಎಂದು ಸಲಹೆ ನೀಡಿದರು.
ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್.ಎಂ. ಚಂದ್ರಶೇಖರ ಹಾಗೂ ಬಸವೇಶ್ವರ ಅಧ್ಯಯನ ಪೀಠದ ಸಂಯೋಜಕ ಪ್ರೊ. ರಾಜಕುಮಾರ ಮಾಲೀಪಾಟೀಲ ಮಾತನಾಡಿದರು. ವಚನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸನ್ಮಾನಿಸಿ ಬಹುಮಾನ ವಿತರಿಸಲಾಯಿತು. ಪ್ರಾಧ್ಯಾಪಕರಾದ ಜ್ಯೋತಿ ಅವಟಿ, ವಿಜಯಮಹಾಂತೇಶ ಹೀರೆಮಠ, ಶ್ರೀನಾಥ ಪಾಟೀಲ ಮತ್ತಿತರರಿದ್ದರು. ರಾಜಕುಮಾರ ಮಾಲೀಪಾಟೀಲ ಸ್ವಾಗತಿಸಿದರು. ದೀಪ ನಿರೂಪಿಸಿದರು. ಡಾ. ಜ್ಯೋತಿ ಅವಟಿ ವಂದಿಸಿದರು.