

ಇಳಕಲ್ಲ (ಗ್ರಾ) : ಮಹರ್ಷಿ ವಾಲ್ಮೀಕಿ ಜಗತ್ತೇ ನಿಬ್ಬೆರಗಾಗುವಂಥ ರಾಮಾಯಣದಂತಹ ಮಹಾನ್ ಗ್ರಂಥ ರಚಿಸಿ ಬದುಕಿನ ತಿರುಳನ್ನು ಲೋಕಕ್ಕೆ ಸಾರಿದ್ದಾರೆ ಎಂದು ಮಾಜಿ ಶಾಸಕ ಡಾ. ವಿಜಯಾನಂದ ಕಾಶಪ್ಪನವರ ಹೇಳಿದರು.
ಸಮೀಪದ ಜಂಬಲದಿನ್ನಿಯಲ್ಲಿ ಮಹರ್ಷಿ ವಾಲ್ಮೀಕಿ ಯುವಕ ಸಂಘ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಸಾಧು- ಸತ್ಪುರುಷರು, ದಾರ್ಶನಿಕರು ಇಡೀ ಮಾನವ ಕುಲದ ಒಳಿತಿಗಾಗಿ ಶ್ರಮಿಸಿದ್ದಾರೆ. ಅಂತವರನ್ನು ಒಂದು ಜಾತಿ ಅಥವಾ ಧರ್ಮಕ್ಕೆ ಸೀಮೀತ ಮಾಡದೇ, ಅವರ ಸಂದೇಶವನ್ನು ಸರ್ವರು ಅನುಸರಿಸಬೇಕು ಎಂದರು.
ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಶಾಂತಕುಮಾರ ಸುರಪುರ, ಹುನಗುಂದ ತಾಲೂಕಿನ ಹಿಂದುಳಿದ ವರ್ಗಗಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಮಹಾಂತೇಶ ಗದ್ದನಕೇರಿ, ಗ್ರಾನೈಟ್ ಉದ್ಯಮಿ ಮಂಜುನಾಥ ಕಟಗಿ, ಚಂದ್ರು ತಳವಾರ, ಶಿವಶಂಕರಪ್ಪ ವಾಲಿಕಾರ, ಸೋಮಶೇಖರ ಬಲಕುಂದಿ, ನಗರಸಭಾ ಸದಸ್ಯ ಸುರೇಶ ಜಂಗ್ಲಿ, ಗ್ರಾಮ ಪಂಚಾಯಿತಿ ಸದಸ್ಯೆ ಕಳಕಮ್ಮ ತಳವಾರ, ಪಿಕೆಪಿಎಸ್ ನಿರ್ದೇಶಕರಾದ ಮಲ್ಲನಗೌಡ ಪಾಟೀಲ, ರಾಮಪ್ಪ ತಳವಾರ, ಪಿಕೆಪಿಎಸ್ ಮಾಜಿ ಅಧ್ಯಕ್ಷ ದೊಡ್ಡನಗೌಡ ಮೇಟಿ, ಹನುಮಪ್ಪ ಕುರಿ, ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಶೇಖರಗೌಡ ಚಿನ್ನನಗೌಡರ, ಕಾಂಗ್ರೆಸ್ ಮುಖಂಡ ಅಮೀನಪ್ಪ ವಾಲಿಕಾರ, ಗ್ರಾಮದ ಪ್ರಮುಖರಾದ ಶಶಿಧರ ಪಾಟೀಲ, ಮಲ್ಲನಗೌಡ ಗೌಡರ ಇತರರಿದ್ದರು.
ಡಾ. ವಿಜಯಾನಂದ ಕಾಶಪ್ಪನವರ, ಶಾಂತಕುಮಾರ ಸುರಪುರ, ವಿಜಯ ಮಹಾಂತೇಶ ಗದ್ದನಕೇರಿ, ಶಿಕ್ಷಕರಾದ ತಿರುಪತಿ ಚಲವಾದಿ, ಆನಂದ ಬೇಗಾರ, ಸಂಗಪ್ಪ ತಳವಾರ ಹಾಗೂ ಸರ್ವ ಸದಸ್ಯರು ಸತ್ಕರಿಸಿ, ಗೌರವಿಸಿದರು.
ಹುಲಿ ಹೈದರ್ ವಾಲ್ಮೀಕಿ ಗುರುಗಳಾದ ನವೀಬಚಂದ್ರ ನಾಯಕ, ವೇದಮೂರ್ತಿ ಕಪ್ಪಯ್ಯ ಹಿರೇಮಠ, ಸರೂರ ಹಾಲುಮತದ ರೇವಣಸಿದ್ಧೇಶ್ವರ ಮಠದ ಗುರುಗಳಾದ ವೇದಮೂರ್ತಿ ಬಸಯ್ಯ ಸಣ್ಣಯ್ಯ ಗುರುವಿನ ಇದ್ದರು.
ಶಿಕ್ಷಕ ಆನಂದ ಬೇಗಾರ ಪ್ರಾರ್ಥಿಸಿದರು. ಹನುಮಪ್ಪ ತಳವಾರ ಸ್ವಾಗತಿಸಿದರು. ಲಿಂಗರಾಜ ಬೇಗಾರ ವಂದಿಸಿದರು. ಶಿಕ್ಷಕ ತಿರುಪತಿ ಚಲವಾದಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಲೋಕ ಕಲ್ಯಾಣಕ್ಕಾಗಿ ಡಾ. ವಿಜಯಾನಂದ ಕಾಶಪ್ಪನವರ ದಂಪತಿ ಗ್ರಾಮದ ವೆಂಕಟೇಶ್ವರ ದೇವರಿಗೆ ಮಹಾರಾದ್ರಾಭಿಷೇಕ ಪೂಜೆ ಮಾಡಿಸಿದರು. ನಂತರ ಕುಂಭಮೇಳ, ಸಕಲ ವಾದ್ಯಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.