

ಬೆಂಗಳೂರಿನಲ್ಲಿ ಇತ್ತಿಚಿಗೆ ನಡೆದ ಸಮಾರಂಭದಲ್ಲಿ ನಾಡಿನಾದ್ಯಂತ ಶಿಕ್ಷಣ, ಉದ್ಯಮ, ಆರೋಗ್ಯ, ಪರಿಸರ ಕಾಳಜಿ, ಸಮಾಜಸೇವೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 42 ಸಾಧಕರಿಗೆ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ವಾಹಿನಿಯ ಪ್ರತಿಷ್ಠಿತ ವಿಜಯ ರತ್ನ-2022 ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪೈಕಿ ಶಿಕ್ಷಣ, ಸಹಕಾರ, ರಾಜಕೀಯ ಹಾಗೂ ಸಮಾಜ ಸೇವೆಯಲ್ಲಿ ತೊಡಗಿರುವ ಉದ್ಯಮಿ ಮಹಾವೀರ ನಿಲಜಗಿ ಅವರಿಗೂ "ವಿಜಯರತ್ನ-2022'' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್, ಚಿತ್ರನಟ ರಮೇಶ್ ಅರವಿಂದ, ನಟಿ ಶರ್ಮಿಳಾ ಮಾಂಡ್ರೆ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ವಿಆರ್ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ ಇತರರು ಉಪಸ್ಥಿತರಿದ್ದರು.
ಹುಕ್ಕೇರಿಯ ಭರವಸೆ ಬೆಳಕು: ಅದೃಷ್ಟ ನಂಬದೇ ನಿರಂತರ ಪರಿಶ್ರಮ ಅಗಾಧ ಶ್ರದೆಟಛಿಯ ಮೂಲಕ ಸಾಧನೆಯ ತುದಿ ತಲುಬೇಕಾಗುತ್ತದೆ. ಅಂಥ ಅಪರೂಪದ ಸಾಧನೆಯನ್ನು ಹುಕ್ಕೇರಿಯ ಉದ್ಯಮಿ ಮಹಾವೀರ ನಿಲಜಗಿ ಮಾಡಿದ್ದಾರೆ. ಜೀವನದ ಒಂದೊಂದೇ ಹಂತಗಳನ್ನು ಯಶಸ್ವಿಯಾಗಿ ದಾಟಿರುವ ಮಹಾವೀರ ನಿಲಜಗಿ ಹುಕ್ಕೇರಿ ಭಾಗದ ಭರವಸೆಯ ಬೆಳಕಾಗಿದ್ದಾರೆ. ನೊಂದವರ ಪರ ಇರುವ ಅವರ ಕಾಳಜಿ ಮೆಚ್ಚುವಂತದ್ದು. ಪ್ರವಾಹ, ಕರೊನಾದಂತ ಸಂಕಷ್ಟದ ಸಂದರ್ಭದಲ್ಲಿ ನೊಂದವರಿಗೆ ದಾರಿದೀಪವಾಗಿದ್ದಾರೆ. ನೆರೆ ವೇಳೆ ಬಹಳಷ್ಟು ಜನರು ಸಂತ್ರಸ್ತರಾದ ಸಂದರ್ಭದಲ್ಲಿ ಅವರ ಬದುಕಿಗೆ ನೆರವಾಗಿದ್ದಾರೆ. ಕಷ್ಟದಲ್ಲಿರುವವರಿಗೆ ಸಹಾಯದ ಹಸ್ತ ಚಾಚುವ ಗುಣ ಹೊಂದಿದ್ದಾರೆ. ಯಾವುದೇ ಫಲಾಪೇಕ್ಷೆಯಿಲ್ಲದೆ ಸುಮಾರು 3 ದಶಕದಿಂದ ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದಾರೆ.
ಹುಕ್ಕೇರಿ ಭಾಗದಲ್ಲಿ ಸಹಕಾರ, ಶಿಕ್ಷಣ, ರಾಜಕೀಯ, ಧಾರ್ಮಿಕ ಕ್ಷೇತ್ರಗಳಲ್ಲಿ ಮಹಾವೀರ ಅವರು ಮೂಡಿಸಿದ ಹೆಜ್ಜೆಗುರುತು ಅಗಾಧವಾದದ್ದು. ಉದ್ಯಮಿಯಾಗಿದ್ದರೂ ಸಮಾಜಮುಖಿ ಸೇವೆಯಲ್ಲೂ ಅವರು ಹಿಂದೆ ಬಿದ್ದಿಲ್ಲ. ತಮ್ಮ ಕೈಲಾದಷ್ಟು ಸಹಾಯ, ಸಹಕಾರ ಮಾಡುವ ಮೂಲಕ ಜನರೊಂದಿಗೆ ಬೆರೆತಿದ್ದಾರೆ. ಮನುಷ್ಯನಿಗೆ ಕೇವಲ ಹಣ ಇದ್ದರೆ ಸಾಲದು. ಅದರೊಂದಿಗೆ ವಿವೇಕ ಹಾಗೂ ಸಂಸ್ಕಾರವೂ ಬೇಕಾಗುತ್ತದೆ. ಅದಕ್ಕೆ ಮಹಾವೀರ ನಿಲಜಗಿ ಜ್ವಲಂತ ಸಾಕ್ಷಿ.
ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸೇವೆ: 2003-04ರಲ್ಲಿ ಮಹಾವೀರ ಶಿಕ್ಷಣ ಸಂಸ್ಥೆ ಪ್ರಾರಂಭ ಮಾಡಿದರು. 2006ರಲ್ಲಿ 4 ಎಕರೆ ಜಾಗದಲ್ಲಿ ಸುಸಜ್ಜಿತ ಕಟ್ಟಡಕ್ಕೆ ಅಡಿಗಲ್ಲು ನೆರವೇರಿಸಿದರು. ಪ್ರಸ್ತುತ ಸಂಸ್ಥೆಯಡಿ ಶ್ರೀ ಮಹಾವೀರ ಪ್ರಾಥಮಿಕ ಮತ್ತು ಪ್ರೌಢಶಾಲೆ, ಶ್ರೀ ವಸಂತ ಎಸ್.ನಿಲಜಗಿ ಐಟಿಐ ಕಾಲೇಜು ಹಾಗೂ ಶ್ರೀ ಮಹಾವೀರ ಪಿಯು ಕಾಲೇಜುಗಳಿವೆ. 2003ರಲ್ಲಿ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆ, 2011ರಲ್ಲಿ ಶ್ರೀ ಮಹಾವೀರ ಪ್ರೌಢಶಾಲೆ ಆರಂಭಿಸಲಾಯಿತು. 2016ರಲ್ಲಿ ಶ್ರೀ ಮಹಾವೀರ ಪದವಿಪೂರ್ವ ಕಾಲೇಜು (ಕಲಾ, ವಾಣಿಜ್ಯ ಹಾಗೂ ವಿಜ್ಞಾನ) ಆರಂಭಿಸಲಾಯಿತು.
ಹಲವರಿಗೆ ಉದ್ಯೋಗ: ಮಹಾವೀರ ಉದ್ಯೋಗ ಸಮೂಹ ಸಂಸ್ಥೆಯ ಸೌಹಾರ್ದ ಸಹಕಾರಿಯಲ್ಲಿ 250 ಹಾಗೂ ಶಿಕ್ಷಣ ಸಂಸ್ಥೆಯಲ್ಲಿ 200 ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದಾರೆ. ಮುಂಬರುವ ದಿನಗಳಲ್ಲಿ ಪ್ರಾರಂಭಿಸುವ ಇನ್ನಿತರ ಸಂಸ್ಥೆಗಳಲ್ಲಿ ಮತ್ತಷ್ಟು ಜನರಿಗೆ ಉದ್ಯೋಗ ನೀಡುವ ಮೂಲಕ ಒಟ್ಟಾರೆ 1000 (ಒಂದು ಸಾವಿರ) ಕುಟುಂಬಗಳ ಬದುಕಿಗೆ ಆಸರೆಯಾಗುವ ಸಂಕಲ್ಪ ಇವರದ್ದಾಗಿದೆ.
ಸಮಾಜ ಸೇವಕ ಮಹಾವೀರ ನಿಲಜಗಿ ಅವರಿಗೆ ಚಿತ್ರನಟ ರಮೇಶ ಅರವಿಂದ ಮತ್ತು ಡಾ. ಆನಂದ ಸಂಕೇಶ್ವರ ಅವರು ವಿಜಯರತ್ನ-2022 ಪ್ರಶಸ್ತಿ ಪ್ರದಾನ ಮಾಡಿದರು. ನನ್ನ ಸಮಾಜಸೇವೆ, ಸಾಧನೆ ಪರಿಗಣಿಸಿ ವಿಜಯವಾಣಿ-ದಿಗ್ವಿಜಯ ನ್ಯೂಸ್ನ ಪ್ರತಿಷ್ಠಿತ "ವಿಜಯರತ್ನ ಸೇವಾ'' ಪ್ರಶಸ್ತಿ ನೀಡಿರುವುದಕ್ಕೆ ತುಂಬ ಸಂತೋಷವಾಗಿದೆ. ಈ ಪ್ರಶಸ್ತಿಯಿಂದ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ. ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವ ನಿಟ್ಟಿನಲ್ಲಿ ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ವತಿಯಿಂದ ಶ್ರಮಿಸಲಾಗುವುದು.
| ಮಹಾವೀರ ನಿಲಜಗಿ ಅಧ್ಯಕ್ಷರು, ಮಹಾವೀರ ಶಿಕ್ಷಣ ಸಂಸ್ಥೆ ಹುಕ್ಕೇರಿ
ಸಹಕಾರಿಯಿಂದ ಶಿಕ್ಷಣ ಕ್ಷೇತ್ರ: 2003-04ರಲ್ಲಿ ಮಹಾವೀರ ಶಿಕ್ಷಣ ಸಂಸ್ಥೆ ಪಾರಂಭ ಮಾಡಿದರು. 2006ರಲ್ಲಿ 4 ಎಕರೆ ಜಮೀನಿನ ವಿಸ್ತಾರದಲ್ಲಿ ಸುಸಜ್ಜಿತ ಕಟ್ಟಡಕ್ಕೆ ಅಡಿಗಲ್ಲು ಸಮಾರಂಭ ನೆರವೇರಿಸಿದರು. ಪ್ರಸ್ತುತ ಮಹಾವೀರ ಪ್ರಾಥಮಿಕ ಮತ್ತು ಪ್ರೌಢಶಾಲೆ, ವಸಂತ ಎಸ್.ನಿಲಜಗಿ ಐಟಿಐ ಕಾಲೇಜು ಹಾಗೂ ಶ್ರೀ ಮಹಾವೀರ ಪಿಯು ಕಾಲೇಜು ಸೇರಿ ಶಿಕ್ಷಣ ಸಂಸ್ಥೆಯಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಶೈಕ್ಷಣಿಕವಾಗಿ ಸಾಧನೆ ಮಾಡಿರುವ ನಿಲಜಗಿ ಅವರು ಕರೊನಾ ಕಾಲದಲ್ಲಿ ಆ ಅನುಭವವನ್ನು ಸಾಮಾಜಿಕ ಹೊಣೆಗಾರಿಕೆ ಭಾಗವಾಗಿ ವಿಸ್ತರಿಸಿದ್ದಾರೆ. ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಮೂಲಕ ಕರೊನಾ ವಾರಿಯರ್ ಆಗಿ ಸೇವೆ ಸಲ್ಲಿಸಿದ್ದಾರೆ. ಮಹಾವೀರ ಉದ್ಯೋಗ ಸಂಸ್ಥೆಯಲ್ಲಿ ಹಲವು ಜನರಿಗೆ ನಿಲಜಗಿ ಅವರು ಉದ್ಯೋಗ ಕಲ್ಪಿಸಿದ್ದಾರೆ. ಮಹಾವೀರ ಅವರ ಉದ್ಯೋಗ ಸಮೂಹ ಸಂಸ್ಥೆಗಳಲ್ಲಿ 450ಕ್ಕೂ ಹೆಚ್ಚು ಜನ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ. ಅವರೆಲ್ಲರಿಗೂ ಜೀವವಿಮೆ, ಭವಿಷ್ಯನಿಧಿ, ಆರೋಗ್ಯ ವೆಚ್ಚ ಸೇರಿ ಸಕಲ ಸೌಲಭ್ಯ ಕಲ್ಪಿಸಿದ್ದಾರೆ. ಉದ್ಯೋಗಿಗಳ ಕುರಿತು ಅಪಾರ ಕಾಳಜಿ ಹೊಂದಿರುವ ಮಹಾವೀರ ಅವರು ಸಿಬ್ಬಂದಿಯಿಂದಲೇ ಸಂಸ್ಥೆಯ ಅಭಿವೃದ್ಧಿ ಎನ್ನುತ್ತಾರೆ.