ಅಪಘಾತದಲ್ಲಿ ತರಕಾರಿ ವ್ಯಾಪಾರಿ ಸಾವು

mahadeva,sathegal, accident, murutha vekthi
Published on


ಚಾಮರಾರಜನಗರ: ಕಾರು ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ತರಕಾರಿ ವ್ಯಾಪಾರಿ ಸ್ಥಳದಲ್ಲೇ ಮೃತಪಟ್ಟರು.


ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಅಗ್ರಹಾರದ ನಿವಾಸಿ ಮಹದೇವ(48) ಮೃತ. ಸ್ವಗ್ರಾಮದಿಂದ ಸೋಮವಾರ ಬೊಪ್ಪೇಗೌಡನ ಪುರದಲ್ಲಿ ನಡೆಯುವ ಜಾತ್ರೆಗೆ ತೆರಳಲು ಪೂಜಾ ಸಾಮಗ್ರಿ ಖರೀದಿಸಲೆಂದು ಭಾನುವಾರ ಸಂಜೆ ಕೊಳ್ಳೇಗಾಲಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ನರೀಪುರ ಸೇತುವೆ ಬಳಿ ಹನೂರಿನ ಚಿಕ್ಕಮಾಲಾಪುರ ಗ್ರಾಮದಿಂದ ಬೆಂಗಳೂರಿಗೆ ಕಡೆಗೆ ತೆರಳುತ್ತಿದ್ದ ಕಾರು ಡಿಕ್ಕಿಯಾಗಿದೆ. ಗಂಭೀರ ಗಾಯಗೊಂಡ ಮಹದೇವ ಸ್ಥಳದಲ್ಲೇ ಮೃತಪಟ್ಟರು.

ಕಾರಿನಲ್ಲಿದ್ದ ನಾಲ್ವರ ಪೈಕಿ ಚಾಲಕ ಮಹೇಶ್ ಕುಮಾರ್ ತಲೆಗೆ ಗಾಯವಾಗಿದೆ. ಈತನ ಸಹೋದರಿ ಹಾಗೂ ಇಬ್ಬರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳು ಮಹೇಶ್‌ನನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೊದೊಯ್ಯಲಾಯಿತು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಅಪಘಾತಕ್ಕೀಡಾದ ವಾಹನಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net