ಎಲೆಕ್ಟ್ರಾನಿಕ್ಸ್ ಸಿಟಿ ಸಮೀಪ ಬೆಂಕಿ ಅವಘಡ: ಪ್ರಾಣ ಉಳಿಸಿಕೊಳ್ಳಲು ಫ್ಲ್ಯಾಟ್​ನಿಂದ ಓಡಿ ಬಂದ ಜನ

New Project (22)
Published on

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸಮೀಪದ ಅಪಾರ್ಟ್​ಮೆಂಟ್​ವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಪ್ರಾಣ ಉಳಿಸಿಕೊಳ್ಳಲು ನಿವಾಸಿಗಳು ಫ್ಲ್ಯಾಟ್​​ನಿಂದ ಓಡಿಬಂದಿದ್ದಾರೆ.

ಎಲೆಕ್ಟ್ರಾನಿಕ್ಸ್ ಸಿಟಿ ಸಮೀಪದ, ಆನೇಕಲ್ ತಾಲೂಕಿನ ಸಂಪಿಗೆ ನಗರದ ವಸುಂಧರಾ ಲೇಔಟ್​ನ ವಿ ಮ್ಯಾಕ್ಸ್ ಚಾಲೇಟ್​ನಲ್ಲಿ ಎರಡು ಫ್ಲ್ಯಾಟ್​​ಗಳಿಗೆ ಬೆಂಕಿಯ ಕೆನ್ನಾಲಿಗೆ ಆವರಿಸಿದ್ದು, ಸ್ಥಳೀಯರಲ್ಲಿ ಆತಂಕ ಮಡುಗಟ್ಟಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net