ಅಯೋಧ್ಯೆಯಲ್ಲಿ ನೋನಿ ಗಿಡ ನೆಟ್ಟ ವ್ಯಾಲ್ಯೂ ಪ್ರಾಡಕ್ಟ್​ ಸಂಸ್ಥೆ

amruth-noni
Published on

ಬೆಂಗಳೂರು: ದೇಶದ ಹೆಮ್ಮೆಯ ಆಯುರ್ವೇದ ಉತ್ಪನ್ನಗಳ ಸಂಸ್ಥೆಯಾದ ವ್ಯಾಲ್ಯೂ ಪ್ರಾಡಕ್ಟ್​ ಸಂಸ್ಥೆ, ಅಯೋಧ್ಯೆಯಲ್ಲಿ ಅಮೃತ್​ನೋನಿ ಗಿಡ ನೆಡುವ ಮೂಲಕ ಹೊಸ ಸಾಂಸತಿಕ ಪರಿವರ್ತನೆಗೆ ಮುನ್ನುಡಿ ಬರೆದಿದೆ.

"ಆಯುಷ್​ ವನ್​' ಮತ್ತು "ಎಕ್​ ಪೇಡ್​ ಮಾ ಕೆ ನಾಮ್​' ಕಾರ್ಯಕ್ರಮದಡಿ ಅಯೋಧ್ಯೆಯ ಮುಖ್ಯ ಅರಣ್ಯಾಧಿಕಾರಿ ಪ್ರಣವ್​ ಜೈನ್​ ಮಾರ್ಗದರ್ಶನದಲ್ಲಿ ಜು.22ರಂದು ಅಯೋಧ್ಯೆಯ ಟಿಎಲ್​ಎಂ ಸಂಸ್ಥೆಯ ಸೌಧದದಲ್ಲಿ ನೋನಿ ಮೊರಿಂಡಾ ಸಿಟ್ರಿೋಲಿಯಾ ಗಿಡವನ್ನು ನೆಡಲಾಯಿತು. ಇದೇ ವೇಳೆ ಅನಂತ್​ಕುಮಾರ್​ ಮತ್ತು ಡಾ.ತೇಜಸ್ವಿನಿ ಅನಂತ್​ ಕುಮಾರ್​ ಸ್ಥಾಪಿಸಿರುವ "ಅದಮ್ಯ ಚೇತನ' ಮುನ್ನಡೆಸುತ್ತಿರುವ "ಅಯೋಧ್ಯೆಯಲ್ಲಿ ಸಸ್ಯಾಗ್ರಹ' ಎಂಬ ಪರಿಸರ ಸಂರಕ್ಷಣೆಯ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಅಯೋಧ್ಯೆಯ ವಿವಿಧ ಸ್ಥಳಗಳಲ್ಲಿ ಅಮೃತ್​ ನೋನಿ, ಸೀತಾ ಅಶೋಕ ಮತ್ತು ಸಿಂಸಾಹ ಗಿಡಗಳನ್ನು ನೆಡುವ ಮೂಲಕ "ಅಯೋಧ್ಯೆಯಲ್ಲಿ ಸಸ್ಯಾಗ್ರಹ' ಯೋಜನೆಗೂ ಸಂಸ್ಥೆ ಕೈಜೋಡಿಸಿದೆ.

ತೇಜಸ್ವಿನಿ ಅನಂತಕುಮಾರ್​ ಮಾತನಾಡಿ, ನೋನಿ ಗಿಡವು ರಾಮಾಯಣ ಮತ್ತು ವೇದಕಾಲದಿಂದ ಇದ್ದರೂ ಅದನ್ನು ನಮಗೆಲ್ಲರಿಗೂ ಪರಿಚಯ ಮಾಡಿಕೊಟ್ಟು, ಅದರ ಪ್ರಯೋಜನವನ್ನು ಜಗತ್ತಿಗೆ ಸಾರಿದವರು ಅಮೃತ್​ ನೋನಿ ಸಂಸ್ಥೆಯ ಶ್ರೀನಿವಾಸ ಮೂರ್ತಿ, ಅಂಬುಜಾ ದಂಪತಿ ಮತ್ತು ಕುಟುಂಬದವರು ಎಂದು ಪ್ರಶಂಸಿದರು.

ನೋನಿ ಗಿಡವನ್ನು ಅಮೃತ್​ ನೋನಿಯಾಗಿ ಮಾಡುವ ಮೂಲಕ ದೇಶದ ಪ್ರತಿ ಮನೆಗೂ ತಲುಪಿಸಿದ್ದಾರೆ. ಹನುಮನ ನಾಡಿನವರಾಗಿ ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ನೋನಿ ಗಿಡ ನೆಡುವ ಮೂಲಕ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದಿದ್ದಾರೆ ಎಂದರು. ವಿಶ್ವ ಹಿಂದು ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಗೋಪಾಲ್​, ಮಾಜಿ ಸಂಸದ ಲಲ್ಲುಸಿಂಗ್​, ಉತ್ತರ ಪ್ರದೇಶದ ಸರ್ಕಾರದ ಕೃಷಿ, ಅಂಕಿ& ಅಂಶಗಳ ಇಲಾಖೆ ನಿರ್ದೇಶಕ ಡಾ. ಸುಮಿತ್​ ಸಿಂಗ್​, ಒರಿಸ್ಸಾದ ಕೇಂದ್ರೀಯ ವಿಶ್ವವಿದ್ಯಾಲಯದ ಕೊರಾಪುಟ್ನ ಕುಲಪತಿ ಪಿ.ವಿ. ಕೃಷ್ಣಭಟ್​ ಮತ್ತಿತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net