ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಎ.ವಿ.ತೀರ್ಥರಾಮ ಅಧಿಕಾರ ಸ್ವೀಕಾರ

download
Published on

ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಎ.ವಿ.ತೀರ್ಥರಾಮ ಅಧಿಕಾರ ಸ್ವೀಕಾರ

ಮಂಗಳೂರು : ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಬಿಜೆಪಿ ನಾಯಕ ಎ.ವಿ.ತೀರ್ಥರಾಮ ಅವರು ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ. ಸರ್ಕಾರ ನೇಮಕಾತಿ ಪ್ರಕಟಣೆ ಹೊರಡಿಸಿ ಸುಮಾರು ಒಂದು ತಿಂಗಳ ಬಳಿಕ ಈಗ
ಎ.ವಿ.ತೀರ್ಥರಾಮ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ಮೀನುಗಾರಿಕಾ ನಿಗಮದ ಅಧ್ಯಕ್ಷ ಸ್ಥಾನವನ್ನು ಮೀನುಗಾರ ಸಮುದಾಯದವರಿಗೆ ನೀಡದೆ ಸುಳ್ಯದ ಒಕ್ಕಲಿಗ ಸಮುದಾಯದ ಎ.ವಿ.ತೀರ್ಥರಾಮ ಅವರಿಗೆ ನೀಡಿರುವ ಬಗ್ಗೆ ಬಿಜೆಪಿಯಲ್ಲಿ ಭಾರಿ ಅಸಮಾಧಾನ ವ್ಯಕ್ತವಾಗಿತ್ತು. ಬಿಜೆಪಿಯ ಮೀನುಗಾರ ಮುಖಂಡರು ಸುದ್ದಿಗೋಷ್ಠಿ ನಡೆಸಿ ಅಸಮಾಧಾನ ಬಹಿರಂಗ ಪಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net