ಒಳ ಮೀಸಲಿಗಾಗಿ ಒಗ್ಗಟ್ಟಿನ ಹೋರಾಟಕ್ಕೆ ಸಲಹೆ

ctd 30 news jata---aaa
Published on

ಚಿತ್ರದುರ್ಗ: ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಗಾಗಿ ಎಲ್ಲ ಪರಿಶಿಷ್ಟರು ಒಗ್ಗೂಡಿ ಹೋರಾಟ ಮಾಡ ಬೇಕೆಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಹುಲ್ಲೂರು ಕುಮಾರಸ್ವಾಮಿ ಹೇಳಿದರು.

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಚಿತ್ರದುರ್ಗಕ್ಕೆ ಗುರುವಾರ ನಗರಕ್ಕೆ ಆಗಮಿಸುತ್ತಿರುವ ಕಾಲ್ನಡಿಗೆ ಜಾಥಾ ಕುರಿತು ನಗರದ ಒನಕೆ ಓಬವ್ವ ವೃತ್ತದಲ್ಲಿ ಏರ್ಪಡಿಸಿದ್ದ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿ,ರಾಜ್ಯಸರ್ಕಾರ ಕೂಡಲೇ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಬೇಕೆಂದು ಆಗ್ರಹಿಸಿದರು.

ಡಾ.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಜಿಲ್ಲಾಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಮಾತನಾಡಿ,ನಗರದ ಯೂನಿಯನ್ ಪಾರ್ಕ್ ಬಳಿ ಮಧ್ಯಾಹ್ನ 2ಗಂಟೆಗೆ ಜಾಥಾವನ್ನು ಸ್ವಾಗತಿಸಲಾಗುವುದು. ಮೀಸಲಾತಿಗೆ ಸಂವಿಧಾನ ಬದ್ಧ ರಕ್ಷಣೆ ಕಲ್ಪಿಸಿರುವಂತೆ,ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಹಂಚಿಕೆಗೆ ಸಂವಿಧಾನದ ರಕ್ಷಣೆ ಅಗತ್ಯವಿದೆ. ಸಾಮಾಜಿಕ ನ್ಯಾಯ ಬಯಸುವರೆಲ್ಲರೂ ರಾಜ್ಯಮಟ್ಟದ ಈ ಜಾಥಾವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.

ವಿವಿಧ ದಲಿತ ಸಂಘಟನೆಗಳ ಜಾಥಾವನ್ನು ಬೆಂಬಲಿಸಿದ್ದು,ಜಾಥಾ ಡಿಸೆಂಬರ್11ರಂದು ಬೆಂಗಳೂರಿಗೆ ತಲುಪಲಿದ್ದು,ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂದಿನಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸುವುದಾಗಿ ತಿಳಿಸಿದರು.

ವಕೀಲರಾದ ಬೆನಕನಹಳ್ಳಿ ಎನ್.ಚಂದ್ರಪ್ಪ,ಪಾಳ್ಯ ಸಿ. ಕು ಮಾರ್,ಬಿ.ಟಿ.ರಾಜಣ್ಣ,ಎಚ್.ರಾಮಸ್ವಾಮಿ,ಕೆ.ವಸಂತ್‌ಕುಮಾರ್, ಉಪನ್ಯಾಸಕರಾದ ಕೆರೆಯಾಗಳಹಳ್ಳಿ ತಿಪ್ಪೇಸ್ವಾಮಿ,ಬನ್ನಿಹಟ್ಟಿ ಮಲ್ಲೇಶ್, ಬಸವರಾಜ್,ಪ್ರೊ.ಎಲ್.ನಾಗರಾಜ್,ರಾಮ್‌ಬಾಬು,ಬಿ.ರಾಜಪ್ಪ,ಕೆಂಚಣ್ಣ ತಮಟಕಲ್ಲು, ಗಂಗಾಧರಪ್ಪ, ದೇವರಾಜ್,ಸಿ.ಚಂದ್ರಪ್ಪ,ಮೋಹನ್ ಕುಮಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net