ಲೋಕ ಅದಾಲತ್‌ನಲ್ಲಿ ಒಂದಾದ ಜೋಡಿ

nrp court
ಎನ್.ಆರ್.ಪುರ ನ್ಯಾಯಾಲಯದಲ್ಲಿ ನ್ಯಾಯಾಧೀಶ ದಾಸರಿಕ್ರಾಂತಿಕಿರಣ್ ಹಾಗೂ ವಕೀಲರ ಸಮ್ಮುಖದಲ್ಲಿ ಎರಡು ಜೋಡಿಗಳು ಹಾರ ಬದಲಾಯಿಸಿಕೊಂಡು ಒಂದುಗೂಡಿದರು. ಗದಿಗೆಪ್ಪನೇಕಾರ್, ಎಸ್.ಎಸ್.ಸಂತೋಷ್‌ಕುಮಾರ್, ವಕೀಲರು ಇದ್ದರು.
Published on

ಎನ್.ಆರ್.ಪುರ: ಪಟ್ಟಣದ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಎರಡು ಜೋಡಿಗಳು ಮರಳಿ ದಾಂಪತ್ಯ ಜೀವನ ನಡೆಸಲು ಒಪ್ಪಿದವು.

ಶನಿವಾರ ನ್ಯಾಯಾಲಯದಲ್ಲಿ ತಾಲೂಕು ಸೇವಾ ಸಮಿತಿ ಹಾಗೂ ತಾಲೂಕು ವಕೀಲರ ಸಂಘದ ಆಶ್ರಯದಲ್ಲಿ ಲೋಕ ಅದಾಲತ್ ಕಾರ್ಯಕ್ರಮ ನಡೆಯಿತು. ಕೌಟುಂಬಿಕ ಪ್ರಕರಣದಡಿ ನ್ಯಾಯಾಲಯದ ಮೆಟ್ಟಿಲೇರಿದ್ದ ಡಿ.ಐಶ್ವರ್ಯಾ ಮತ್ತು ಎಸ್.ಸಂದೀಪ್, ರಮ್ಯಾ ಮತ್ತು ಸುನೀಲ್‌ಕುಮಾರ್ ದಂಪತಿಯನ್ನು ರಾಜಿ ಮಾಡಿಸಿ, ಸಮಾಲೋಚನೆ, ಸಂಧಾನ ನಡೆಸಿ, ಎಲ್ಲರ ಒಪ್ಪಿಗೆ ಪಡೆದ ಕಿರಿಯ ಸಿವಿಲ್ ನ್ಯಾಯಾಧೀಶ ದಾಸರಿಕ್ರಾಂತಿಕಿರಣ್ ಅವರು ಎರಡೂ ಜೋಡಿಗಳನ್ನು ಒಂದುಗೂಡಿಸಿದರು. ನಂತರ ಜೋಡಿಗಳು ನ್ಯಾಯಾಧೀಶರ ಸಮ್ಮುಖದಲ್ಲಿ ಹಾರ ಬದಲಾಯಿಸಿಕೊಂಡರು.
ಸರ್ಕಾರಿ ಅಭಿಯೋಜಕ ಗದಿಗೆಪ್ಪನೇಕಾರ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಸಂತೋಷ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net