

ಗೋಕರ್ಣ: ಕಾಲಕ್ಕೆ ನಮ್ಮ ಸಂಪ್ರದಾಯದಲ್ಲಿ ವಿಶಿಷ್ಟ ಸ್ಥಾನ, ಗೌರವವಿದೆ. ಇದರಿಂದಾಗಿಯೇ ನಮ್ಮ ಬದುಕಿನಲ್ಲಿಯೂ ಕಾಲಕ್ಕೆ ಅತ್ಯಂತ ಮಹತ್ವದ ಮನ್ನಣೆ ಪ್ರಾಪ್ತವಾಗಿದೆ ಎಂದು ಅನಾವರಣ ಚಾತುರ್ಮಾಸ್ಯದ 4ನೇ ದಿನವಾದ ಬುಧವಾರ 50ನೇ ವರ್ಧಂತಿ ಪ್ರಯುಕ್ತ ’ಕಾಲ’ ವಿಷಯದ ಬಗ್ಗೆ ಪ್ರವಚನ ನೀಡಿದರು.
ಸತ್-ಸಂಪ್ರದಾಯ ಕಾಲವನ್ನು ಮುಹೂರ್ತ ಎಂಬುದಾಗಿ ಹೆಸರಿಸಿದೆ. ಮುಹೂರ್ತದ ಮುಖೇನ ಶುಭ ಮತ್ತು ಅಶುಭಗಳ ನಿರ್ಣಯವಾಗುತ್ತದೆ. ಕಾಲ ಮತ್ತು ದೇಶಗಳ ಪರಿಜ್ಞಾನ ಉಳ್ಳವನು ಜೀವನದಲ್ಲಿ ಎಂದೂ ಸೋಲುವುದಿಲ್ಲ. ಆತ ಮಹತ್ಕಾರ್ಯಗಳ ಸಾಧಕನಾಗುತ್ತಾನೆ ಎಂದರು.
ಶ್ರೀಮಾತೆ ವಿಜಯಲಕ್ಷ್ಮೀ ಅವರು ಜ್ಯೋತಿ ಬೆಳಗಿಸಿದರು. ಹೊರನಾಡು ಕ್ಷೇತ್ರದ ಧರ್ಮದರ್ಶಿ ಭೀಮೇಶ್ವರ ಜೋಶಿ ದಂಪತಿ ವರ್ಧಂತಿ ದಿನದ ಗುರುಭಿಕ್ಷಾಸೇವೆ ಸಮರ್ಪಿಸಿದರು. ಶ್ರೀಮಠದ ಅವಿಚ್ಛಿನ್ನ ಪರಂಪರೆಯ 33ನೇ ಯತಿವರ್ಯರಾಗಿದ್ದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರು ರಚಿಸಿರುವ ಅಲಭ್ಯ ಗ್ರಂಥರತ್ನ ’ಉತ್ತರ ಸಹ್ಯಾದ್ರಿಯೊಳಗಿನ ಹವ್ಯಕ, ದ್ರಾವಿಡ ಬ್ರಾಹ್ಮಣರ ಉತ್ಪತ್ತಿಯ ಇತಿಹಾಸವು’ ಕೃತಿಯನ್ನು ಶ್ರೀಪರಿವಾರದ ಕೆ.ವಿ. ರಮೇಶ ಅನಾವರಣಗೊಳಿಸಿದರು.
ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಕಾರ್ಯದರ್ಶಿ ಮಧು ಜಿ.ಕೆ., ವ್ಯವಸ್ಥಾಪಕ ಪ್ರಮೋದ ಮುಡಾರೆ, ವೇ. ಸುಬ್ರಾಯ ಅಗ್ನಿಹೋತ್ರಿ, ವೇ.ಶ್ರೀಶ, ಮೋಹನ ಭಟ್ಟ ಮತ್ತಿತರರಿದ್ದರು.