ವಿದ್ಯಾರ್ಥಿಯ ವಿವರವುಳ್ಳ ಅಪಾರ್ ಯುನಿಕ್ ಐಡಿ ಅನುಕೂಲಕರ

adhar update abhiyana
ಕಾಚಿನಕಟ್ಟೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳ ಆಧಾರ್ ತಿದ್ದುಪಡಿ ಬೃಹತ್ ಆಂದೋಲನಕ್ಕೆ ಚಾಲನೆ ನೀಡಲಾಯಿತು. ಎನ್.ಹೇಮಂತ್, ರಮೇಶ್, ಗೀತಾ ಚಂದ್ರಶೇಖರ್, ಮಂಜುನಾಥ್ ರೋಣದ್, ನಿರಂಜನಮೂರ್ತಿ, ಪಂಡರಿನಾಥ್, ಅಶೋಕ್ ಇದ್ದರು.
Published on

ಶಿವಮೊಗ್ಗ: ವಿದ್ಯಾರ್ಥಿಯ ಸಂಪೂರ್ಣ ವಿವರವುಳ್ಳ ಅಪಾರ್ ಯುನಿಕ್ ಗುರುತಿನ ಚೀಟಿ, ಇತರೆ ಸೇವೆ, ಸೌಲಭ್ಯ ಪಡೆಯಲು ಆಧಾರ್ ಏಕರೂಪತೆ ಅವಶ್ಯಕ. ಈ ದಿಸೆಯಲ್ಲಿ ಜಿಲ್ಲಾದ್ಯಂತ ವಿದ್ಯಾರ್ಥಿಗಳ ಬೃಹತ್ ಆಧಾರ್ ತಿದ್ದುಪಡಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಸಿಇಒ ಎನ್.ಹೇಮಂತ್ ಹೇಳಿದರು.

ಕಾಚಿನಕಟ್ಟೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಿಎಸ್‌ಸಿ ಸರ್ವೀಸಸ್ ಇಂಡಿಯಾ ಲಿ., ಶಿಕ್ಷಣ ಇಲಾಖೆ ಆಶ್ರಯದಲ್ಲಿ ಶಿವಮೊಗ್ಗ ಬಿಇಒ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿಯಿಂದ ಆಯೋಜಿಸಿದ್ದ ಆಧಾರ್ ತಿದ್ದುಪಡಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರಾಥಮಿಕ, ಪ್ರೌಢ ಮತ್ತು ಪಿಯು ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಮಾಹಿತಿಯು ಶಾಲೆಗಳಲ್ಲಿ ಹಾಗೂ ಆಧಾರ್ ಕಾರ್ಡ್‌ನಲ್ಲಿ ಒಂದೇ ರೀತಿಯಾಗಿರಬೇಕು. ಹೆಸರು, ತಂದೆ ಹೆಸರು, ಇತರೆ ಮಾಹಿತಿ ವ್ಯತ್ಯಾಸ ಇರಬಾರದು. ಆದ್ದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಆಧಾರ್ ತಿದ್ದುಪಡಿ ಅನುಕೂಲವಾಗಿದೆ. ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಎಲ್ಲ ವಿವರಗಳುಳ್ಳ ಅಪಾರ್ ಯುನಿಕ್ ಗುರುತಿನ ಚೀಟಿ ನೀಡುತ್ತಿದೆ. ಇದರಲ್ಲಿ ವಿದ್ಯಾರ್ಥಿಗಳ ಸಕಲ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಚಂದ್ರಶೇಖರ್ ಮಾತನಾಡಿ, ವಿದ್ಯಾರ್ಥಿಗಳ ಆಧಾರ್ ಮತ್ತು ಶಾಲಾ ಮಾಹಿತಿ ಏಕರೂಪಗೊಳಿಸಲು ಆಧಾರ್ ತಿದ್ದುಪಡಿ ಆಂದೋಲನ ಏರ್ಪಡಿಸಲಾಗಿದೆ. ಅವಶ್ಯಕತೆ ಇರುವ ಎಲ್ಲ ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಬಿಇಒ ರಮೇಶ್, ಸಿಎಸ್‌ಸಿ ಸರ್ವೀಸಸ್ ಇಂಡಿಯಾ ಮುಖ್ಯಸ್ಥ ಮಂಜುನಾಥ್ ರೋಣದ್, ಶಿಕ್ಷಣಾಧಿಕಾರಿ ನಿರಂಜನಮೂರ್ತಿ, ಕಾಚಿನಕಟ್ಟೆ ಪ್ರೌಢಶಾಲೆ ಮುಖ್ಯ ಶಿಕ್ಷಕ ಪಂಡರಿನಾಥ್, ಸಹ ಶಿಕ್ಷಕ ಅಶೋಕ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net