ಮಠಗಳಿಂದ ಕರುನಾಡಿಗೆ ವಿಶಿಷ್ಟ ಕೊಡುಗೆ

SWAMIJI
Published on

ರೋಣ: ನಾಡಿನ ಎಲ್ಲ ಮಠಗಳು ದಾಸೋಹ ಪರಂಪರೆ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜಕ್ಕೆ ಅತ್ಯುತ್ತಮ ಸೇವೆ ಸಲ್ಲಿಸುವಲ್ಲಿ ನಿರತವಾಗಿದ್ದು ಇದರಿಂದ ಬಡ ಜನತೆಗೆ ಅಪಾರ ಅನುಕೂಲವಾಗಿದೆ ಎಂದು ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ ಹೇಳಿದರು.

ತಾಲೂಕಿನ ಕೊತಬಾಳ ಗ್ರಾಮದ ಅಂಕಲಗಿ ಅಡವಿ ಸಿದ್ಧೇಶ್ವರ ಮಠದ ಹಿರಿಯ ಶ್ರೀಗಳಾದ ರಾಜಶೇಖರ ಶಿವಯೋಗಿಗಳ 24ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಎಡೆಯೂರು ಸಿದ್ಧಲಿಂಗೇಶ್ವರ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಠಗಳು ಉತ್ತಮ ಸಂಸ್ಕಾರ ಮತ್ತು ಸಮಾಜಮುಖಿ ಸೇವೆಗಳ ಮೂಲಕ ನಾಡಿಗೆ ಶ್ರೇಷ್ಠ ಕೊಡುಗೆ ನೀಡುತ್ತಿವೆ ಎಂದರು.

ಅಂಕಲಗಿ ಅಡವಿ ಸಿದ್ಧೇಶ್ವರ ಮಠದ ಗಂಗಾಧರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಪ್ರವಚನಕಾರರಾಗಿ ಗುಳೇದಗುಡ್ಡ ಒಪ್ಪತ್ತೇಶ್ವರ ಮಠದ ಒಪ್ಪತ್ತೇಶ್ವರ ಮಹಾಸ್ವಾಮೀಜಿ, ಈರಣ್ಣ ಯಾಳಗಿ, ಮುತ್ತಣ್ಣ ಅಸೂಟಿ, ಕಾಳಿಂಗಪ್ಪ ಉಪ್ಪಾರ, ಸಣ್ಣಪ್ಪ ಕೊರ್ಲಹಳ್ಳಿ, ಬಶೆಟ್ಟಪ್ಪ ಅಂಗಡಿ, ಭೀಮವ್ವ ಮುಗಳಿ, ಶಶಿಕಲಾ ಉಮಚಗಿ, ಶಿವಪ್ಪ ನೆಲ್ಲೂರ, ನಾಗಪ್ಪ ಕೋಡಿಕೊಪ್ಪದ, ನಿಂಗಪ್ಪ ಮಾದರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net