ಮಲ್ಪೆ ಕಡಲ ತೀರದಲ್ಲಿ ಬೀಳುತ್ತಿದೆ ಚಿನ್ನ! ಕಸದ ರಾಶಿಯಲ್ಲಿ ಬಂಗಾರದ ಬೇಟೆಗೆ ಮುಗಿಬಿದ್ದ ಜನ

Malpe Beach
Published on

ಉಡುಪಿ: ಮಲ್ಪೆ ಬೀಚ್​ನಲ್ಲಿ ಚಿನ್ನದ ಬೇಟೆಗಾಗಿ ಜನ ಮುಗಿಬಿದ್ದಿದ್ದಾರೆ. ಕಡಲತೀರದಲ್ಲಿ ಸಂಗ್ರಹ ಆಗಿರುವ ಕಸದಲ್ಲಿ ಬಂಗಾರಕ್ಕಾಗಿ ಶೋಧಿಸುತ್ತಿದ್ದಾರೆ.

ಮಳೆಗಾಲದಲ್ಲಿ ಇಂತಹ ದೃಶ್ಯ ಈ ಭಾಗದಲ್ಲಿ ಕಂಡು ಬರುತ್ತೆ. ಪ್ರತಿ ವರ್ಷ 35 ಲಕ್ಷಕ್ಕೂ ಅಧಿಕ ಪ್ರವಾಸಿಗರು ಮಲ್ಪೆ ಬೀಚ್​ಗೆ ಭೇಟಿ ನೀಡುತ್ತಾರೆ. ನೀರಲ್ಲಿ ಆಟವಾಡುವಾಗ, ಈಜಾಡುವ ಸಮಯದಲ್ಲಿ ಚಿನ್ನಾಭರಣ ಸಾವಿರಾರು ಜನರು ಕಳೆದುಕೊಳ್ಳುತ್ತಾರೆ. ಕೆಲವು ಧಾರ್ಮಿಕ ವಿಧಿಗಳಲ್ಲೂ ಕಡಲಿಗೆ ಚಿನ್ನ ಬಿಡುವ ಪದ್ಧತಿ ಇದೆ.

ಪ್ರವಾಸಿಗರು ಕಡಲಿನಲ್ಲಿ ಕಳೆದುಕೊಂಡ ಬೆಳ್ಳಿ-ಚಿನ್ನಾಭರಣ ಮಳೆಗಾಲದಲ್ಲಿ ದಡಕ್ಕೆ ಬರುತ್ತೆ. ಮಳೆಗಾಲದಲ್ಲಿ ಬಾರೀ ಬಿರುಗಾಳಿ ಎದ್ದಾಗ ಬೃಹತ್ ಅಲೆಗಳ ಜತೆ ಕಸ ಸೇರಿದಂತೆ ಎಲ್ಲವೂ ದಡಕ್ಕೆ ಬಂದು ಬೀಳುತ್ತೆ. ಕಡಲಿನ ಆಳದಿಂದ ವಿಶೇಷ ಅಲೆಗಳು ಎದ್ದಾಗ ಚಿನ್ನ-ಬೆಳ್ಳಿ ಆಭರಣ, ಲೋಹದ ವಸ್ತು ಸೇರಿದಂತೆ ಕಸವನ್ನೂ ಮೇಲಕ್ಕೆ ಎಸೆದು ಹೋಗುತ್ತೆ.

ಹಾಗಾಗಿ ಇಲ್ಲಿನ ಸ್ಥಳೀಯರು ಕಡಲ ತೀರದ ಕಸದ ರಾಶಿಯಲ್ಲಿ ಚಿನ್ನ-ಬೆಳ್ಳಿಗಾಗಿ ಹುಡುಕಾಡುತ್ತಿರುವ ದೃಶ್ಯ ಕಂಡುಬರುತ್ತಿದೆ. ಚಿನ್ನ ಸಿಕ್ಕರೂ ಆ ಬಗ್ಗೆ ಕೆಲವರು ಗೌಪ್ಯತೆ ಕಾಯ್ದುಕೊಳ್ಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net