ನೈಸ್​ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನ ಸಂಚಾರಕ್ಕೆ ನಿರ್ಬಂಧ

nice road
Published on

ಬೆಂಗಳೂರು: ನಂದಿ ಇನ್ಫಾಸ್ಟ್ರಕ್ಚರ್​ ಕಾರಿಡಾರ್​ ಎಂಟರ್​ಪೈಸೆಸ್​ (ನೈಸ್​) ಆಡಳಿತ ಮಂಡಳಿಯು ಜ.16 ರಿಂದ ನೈಸ್​ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನ ಸಂಚಾರ ನಿರ್ಬಂಧಿಸಿದೆ.

ಬೆಂಗಳೂರು ನಗರ ಜಂಟಿ ಪೊಲೀಸ್​ ಆಯುಕ್ತ (ಸಂಚಾರ) ಡಾ. ಬಿ.ಆರ್​. ರವಿಕಾಂತೇಗೌಡ ಅವರ ಸೂಚನೆ ಮೇರೆಗೆ ಹಾಗೂ ಪ್ರಯಾಣಿಕರ ಸುರಕ್ಷತೆ ಸಲುವಾಗಿ ಕ್ರಮ ಕೈಗೊಳ್ಳಲಾಗಿದೆ. ರಾತ್ರಿ 10 ಗಂಟೆಯಿಂದ ಮುಂಜಾನೆ 5 ಗಂಟೆವರೆಗೆ ನೈಸ್​ ರಸ್ತೆಯಲ್ಲಿ ದ್ವಿಚಕ್ರ ವಾಹನ ಸಂಚಾರವನ್ನು ಮುಂದಿನ ಆದೇಶದವರೆಗೂ ನಿರ್ಬಂಧಿಸಲಾಗಿದೆ ಎಂದು ನೈಸ್​ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಇತ್ತೀಚೆಗೆ ನೈಸ್​ ರಸ್ತೆಯಲ್ಲಿ ದ್ವಿಚಕ್ರ ವಾಹನ ಅಪಘಾತ ಹೆಚ್ಚಾಗುತ್ತಿದ್ದವು. ಜತೆಗೆ ಬೈಕ್​ ಸವಾರರ ಸೋಗಿನಲ್ಲಿ ಒಳ ಪ್ರವೇಶ ಮಾಡಿ ಕಿಡಿಗೇಡಿಗಳು ಸರಕು ಸಾಗಾಣೆ ವಾಹನ, ಕಾರುಗಳನ್ನು ಅಡ್ಡಗಟ್ಟಿ ರಾಬರಿ, ಸುಲಿಗೆ ಮಾಡುತ್ತಿದ್ದರು. ಯುವಕ-ಯುವತಿಯರು ರಸ್ತೆ ನಡುವೆ ಬೈಕ್​ ನಿಲ್ಲಿಸಿ ಕಾಲಹರಣ ಮಾಡುವುದು, ವೀಲ್ಹಿಂಗ್​ ಮಾಡುತ್ತಿದ್ದರು. ಇದರಿಂದ ಸವಾರರ ಸುಕ್ಷತೆ ಇರಲಿಲ್ಲ. ಈ ಎಲ್ಲ ದೃಷ್ಟಿಯಿಂದ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net