ಎರಡು ದಿನಗಳ ಬೃಹತ್ ಉದ್ಯೋಗ ಮೇಳ

A two-day massive job fair
ವಿಜಯಪುರದಲ್ಲಿ ನಡೆದ ಬೃಹತ್ ಉದ್ಯೋಗ ಮೇಳದಲ್ಲಿ ಉದ್ಯೋಗ ಪಡೆದ ಯುವಕರು ಗ್ರುಪ್ ಫೋಟೊ ತೆಗೆಸಿಕೊಂಡು ಸಂಭ್ರಮಿಸಿದರು. ಅಧಿಕಾರಿಗಳಾದ ದಯಾನಂದ, ಹರಿಪ್ರಸಾದ, ಪುನಿತ, ರವಿ ದೊಡ್ಡಹಳ್ಳಿ, ಸುನೀಲ ಕುಮಾರ, ಗುರುರಾಜ ಮತ್ತಿತರರಿದ್ದಾರೆ.
Published on

ವಿಜಯಪುರ: ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರ ಆಶಯದಂತೆ ನಗರದಲ್ಲಿ ಟೊಯೊಟಾ ಕಂಪನಿಯವರು ನಡೆಸಿದ ಎರಡು ದಿನಗಳ ಬೃಹತ್ ಉದ್ಯೋಗ ಮೇಳ ಭಾರಿ ಯಶಸ್ವಿಯಾಗಿದ್ದು, 415 ಯುವಕರು ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಜಿಲ್ಲೆಯ ಬಡ ಮತ್ತು ಪ್ರತಿಭಾವಂತ ಐಟಿಐ, ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಹೆಸರಾಂತ ಕಂಪೆನಿಗಳಲ್ಲಿ ಉದ್ಯೋಗ ಒದಗಿಸಲು ಸಚಿವ ಎಂ. ಬಿ. ಪಾಟೀಲರು ಕ್ರಮ ಕೈಗೊಂಡಿದ್ದಾರೆ. ಈ ನಿಟ್ಟಿನಲ್ಲಿ ಸಚಿವರ ಕೋರಿಕೆಗೆ ಸ್ಪಂದಿಸಿದ ಟೊಯೊಟಾ ಕಂಪನಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದ ವಿಜಯಪುರ ಜಿಲ್ಲೆಯ ಐಟಿಟಿನ 245 ಮತ್ತು ಡಿಪ್ಲೊಮಾದ 435 ವಿದ್ಯಾರ್ಥಿಗಳ ಸೇರಿದಂತೆ ಒಟ್ಟು 680 ಅಭ್ಯರ್ಥಿಗಳಿಗೆ ಬುಧವಾರ ಪರೀಕ್ಷೆ ನಡೆಸಿತ್ತು.

ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಬುಧವಾರ ಮತ್ತು ಗುರುವಾರ ಸಂದರ್ಶನ ನಡೆಸಲಾಯಿತು. ಇದರಲ್ಲಿ ಐಟಿಐನ 158 ಮತ್ತು ಡಿಪ್ಲೊಮಾದ 257 ಅಭ್ಯರ್ಥಿಗಳು ಸೇರಿದಂತೆ ಒಟ್ಟು 415 ಜನ ಉದ್ಯೋಗ ಪಡೆದಿದ್ದಾರೆ.

ಟೊಯೊಟಾ ಕಂಪೆನಿಯ ಅಧಿಕಾರಿಗಳಾದ ದಯಾನಂದ, ಹರಿಪ್ರಸಾದ, ಪುನೀತ, ರವಿ ದೊಡ್ಡಹಳ್ಳಿ, ಸುನೀಲ ಕುಮಾರ, ಗುರುರಾಜ, ಆನಂದ ಮತ್ತು ಬಿಎಲ್ಡಿಇ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಪಿ.ಬಿ. ಕಳಸಕೊಂಡ ಹಾಗೂ ಎಂ.ಡಿ. ಪಡಸಲಗಿ ಅವರೊಂದಿಗೆ ಉದ್ಯೋಗ ಪಡೆದ ಯುವಕರು ಗ್ರುಪ್ ಫೋಟೊ ತೆಗೆಸಿಕೊಂಡು ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net