ಯಕ್ಷಗಾನ ಕಲಾವಿದಗೆ ಗೌರವಾರ್ಪಣೆ

Ism_Yakshagana
Published on

ಪುತ್ತೂರು ಗ್ರಾಮಾಂತರ: ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ, ಹಿರಿಯ ಯಕ್ಷಗಾನ ಕಲಾವಿದ ನುಳಿಯಾಲು ಸಂಜೀವ ರೈ ಮತ್ತು ಸುಗುಣ ಎಸ್.ರೈ ದಂಪತಿಗೆ ಬೆಟ್ಟಂಪಾಡಿ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ವತಿಯಿಂದ ಗೌರವಾರ್ಪಣೆ ಇತ್ತೀಚೆಗೆ ನಡೆಯಿತು.

ನಿವೃತ್ತ ಮುಖ್ಯ ಶಿಕ್ಷಕ ಮಂಜುಳಗಿರಿ ವೆಂಕಟ್ರಮಣ ಭಟ್ ಗೌರವಿಸಿದರು. ಹಿರಿಯ ಅರ್ಥಧಾರಿ ಭಾಸ್ಕರ ಶೆಟ್ಟಿ ಅಭಿನಂದನಾ ನುಡಿಗಳನ್ನಾಡಿದರು. ಅಧ್ಯಕ್ಷತೆ ವಹಿಸಿದ್ದ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘದ ಸಂಘದ ಅಧ್ಯಕ್ಷ ಐ.ಗೋಪಾಲಕೃಷ್ಣ ರಾವ್, ಸಂಜೀವ ರೈ ಅವರ ಸಹೋದರ ನಿವೃತ್ತ ಮುಖ್ಯ ಶಿಕ್ಷಕ ಮನೋಹರ ರೈ ಬಾಜುವಳ್ಳಿ ಮಾತನಾಡಿದರು.

ಬೆಟ್ಟಂಪಾಡಿ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ವಿನೋದ್ ರೈ ಗುತ್ತು, ರಾಮಯ್ಯ ರೈ, ಜಗನ್ನಾಥ ರೈ ಕಡಮ್ಮಾಜೆ, ಲಕ್ಷ್ಮಣ ಮಣಿಯಾಣಿ ತಲೆಪ್ಪಾಡಿ, ದಾಮೋದರ ಎಂ, ಕಿಶೋರ್ ಶೆಟ್ಟಿ ಕೋರ್ಮಂಡ, ಶೇಖರ ಮಿತ್ತಡ್ಕ, ಅಂಕಿತ್ ಕೋನಡ್ಕ ಮತ್ತಿತರರು ಉಪಸ್ಥಿತರಿದ್ದರು.

ಸಂಘದ ಭಾಗವತ ಶ್ಯಾಂಪ್ರಸಾದ್ ಪ್ರಾರ್ಥಿಸಿದರು. ಕಾರ್ಯದರ್ಶಿ ಪ್ರದೀಪ್ ರೈ ಕೆ. ಸ್ವಾಗತಿಸಿದರು. ಮಂಗಳೂರಿನ ಬೆಸೆಂಟ್ ವಿದ್ಯಾಸಂಸ್ಥೆಯ ಶಿಕ್ಷಕ ಪ್ರಶಾಂತ್ ರೈ ವಂದಿಸಿದರು. ಉಮೇಶ್ ಮಿತ್ತಡ್ಕ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net