‘ಮೌನರಾಗ’ ಗೀತ ನಮನ

Published on

ಮೈಸೂರು: ಹೃದಯಾಘಾತದಿಂದ ನಿಧನರಾದ ಕಲಾಪೋಷಕ ರವಿಗೌಡ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ನಿಟ್ಟಿನಲ್ಲಿ ಡಾ.ರಾಜ್‌ಕುಮಾರ್ ಕಲಾ ಸೇವಾ ಟ್ರಸ್ಟ್‌ನಿಂದ ಅ.16ರಂದು ‘ಮೌನರಾಗ’ ಗೀತ ನಮನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಬಿ.ಎಸ್.ಜಯರಾಮರಾಜು ತಿಳಿಸಿದರು.
ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾದಲ್ಲಿ ಅಂದು ಸಂಜೆ 5.30ಕ್ಕೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸುರೇಶ್, ಚಂದ್ರಶೇಖರ್, ಡಾ.ವೈ.ಡಿ.ರಾಜಣ್ಣ, ಖಯೂಂ ಇನ್ನಿತರರು ಗೀತೆಗಳನ್ನು ಹಾಡಲಿದ್ದಾರೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರವಿಗೌಡ ಅವರು ಕಲಾವಿದರ ಬಗ್ಗೆ ವಿಶೇಷ ಗೌರವ ಹೊಂದಿದ್ದರು. ಅವರು ಉತ್ತಮ ಗಾಯಕರೂ ಆಗಿದ್ದರಲ್ಲದೆ, ಡಾ.ರಾಜ್‌ಕುಮಾರ್ ಅವರ ಆದರ್ಶ ಪಾಲಿಸುತ್ತಿದ್ದರು. ರವಿಗೌಡ ಅವರೊಂದಿಗೆ ಮತ್ತೊಬ್ಬ ಗಾಯಕ ಮುಖೇಶ್ ಮಡಿಕೇರಿ ಅವರಿಗೂ ನಮನ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಆಯೋಜಕರಾದ ಕ್ಯಾತನಹಳ್ಳಿ ಪ್ರಕಾಶ್, ಸುರೇಶ್, ಚಂದ್ರಶೇಖರ್, ಖಯೂಂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net