ತೆನ್ನಿರ ತಿಮ್ಮಯ್ಯ ದಂಪತಿಗಳಿಗೆ ಸನ್ಮಾನ

MDK06
Published on

ಮಡಿಕೇರಿ: ಮಡಿಕೇರಿ ತಾಲೂಕಿನ ಅರ್ವತ್ತೋಕ್ಲು ಗ್ರಾಮದ ಶ್ರೀ ವಿಷ್ಣಪ್ಪ ದೇವಾಲಯದ ಆವರಣಕ್ಕೆ ಆರು ಲಕ್ಷದ ಹತ್ತು ಸಾವಿರ ರೂಗಳ ವೆಚ್ಚದಲ್ಲಿ ಇಂಟರ್ ಲಾಕ್(ನೆಲಹಾಸು) ಅಳವಡಿಸಿದ ದಾನಿಗಳಾದ ತೆನ್ನಿರ ತಿಮ್ಮಯ್ಯ ಹಾಗೂ ಅವರ ಪತ್ನಿ ಚೋಂದಕ್ಕಿ ರವರನ್ನು ದೇವಾಲಯದ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಅಭಿನಂದಿಸಿದರು.


ಕುಟುಂಬಸ್ಥರಾದ ತೆನ್ನಿರ ಮೈನ ಮಾತನಾಡಿ, ಪ್ರತಿಯೊಬ್ಬ ಮನುಷ್ಯ ದುಡಿಮೆಯಿಂದ ಹಣ ಸಂಪಾದಿಸುತ್ತಾರೆ. ಗಳಿಕೆ-ಉಳಿಕೆ ಹಣವನ್ನು ಪ್ರತಿಫಲಾಕ್ಷೆ ಇಲ್ಲದೆ ದೇವರ ಕಾರ್ಯಕ್ಕೆ ವಿನಿಯೋಗಿಸಬೇಕು. ಇಂತಹ ಸತ್ಕಾರ್ಯ ಮಾಡಿದ ತಿಮ್ಮಯ್ಯ ದಂಪತಿಗಳು ಅಭಿನಂದನಾರ್ಹರು ಎಂದು ಹೇಳಿದರು.


ದೇವಾಲಯ ಸಮಿತಿ ಅಧ್ಯಕ್ಷ ಪೂಜಾರಿರ ಮಾದಪ್ಪರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಪುತ್ತೇರಿರ ಸೋಮಯ್ಯ, ಪದಾಧಿಕಾರಿಗಳಾದ ಮುಂಜಾದಿರ ವಾಸು ನಾಣಯ್ಯ, ತೆನ್ನಿರ ಮಿಟ್ಟು ಪೆಮ್ಮಯ್ಯ, ತಳೂರು ಸೋಮಣ್ಣ, ಚಾತುರನ ಅಶೋಕ್, ಚೆರುಮಾಡಂಡ ಸತೀಶ್ ಸೋಮಣ್ಣ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net