ಸ್ನೇಹ ಬಳಗದಿಂದ ಶಿಕ್ಷಕಿ ರೇಣುಕಾ ಹಿರೇಗೌಡರಗೆ ಸನ್ಮಾನ

Teacher Renuka Hiregoudar honor
Published on

ಶಿಗ್ಗಾಂವಿ: ತಾಲೂಕಿನ ಕಬನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ರೇಣುಕಾ ಹ. ಹಿರೇಗೌಡರ ಅವರು ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದು, ರೇಣುಕಾ ಹಿರೇಗೌಡರ ಅವರನ್ನು ಅವರ ಬನ್ನೂರಿನ ನಿವಾಸದಲ್ಲಿ 99 ಸ್ನೇಹ ಬಳಗದ ವತಿಯಿಂದ ಸೋಮವಾರ ಸನ್ಮಾನಿಸಿ ಗೌರವಿಸಲಾಯಿತು.

ಗೆಳೆಯರ ಬಳಗದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿರುವುದು ಖುಷಿ ತಂದಿದೆ. ಈ ಪ್ರಶಸ್ತಿ ನನಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದು, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹೆಚ್ಚಿನ ಜವಾಬ್ದಾರಿಯೊಂದಿಗೆ ಮಕ್ಕಳ ಬೋಧನೆಗೆ ಹೆಚ್ಚು ಒತ್ತು ನೀಡುತ್ತೇನೆ. ಶಿಕ್ಷಕ ವೃತ್ತಿಯ ಗೌರವ ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಮ್ಮ 99 ಗೆಳೆಯರ ಬಳಗದ ಸ್ನೇಹಿತರೆಲ್ಲರೂ ಸನ್ಮಾನಿಸಿ ಗೌರವಿಸುತ್ತಿರುವುದು ಜವಾಬ್ದಾರಿಯನ್ನು ಹೆಚ್ಚಿಸುವುದರ ಜತೆಗೆ ಮತ್ತಷ್ಟು ಸಂತೋಷ ತಂದಿದೆ ಎಂದು ಹೇಳಿದರು.

ಸ್ನೇಹಿತರಾದ ಬಸವರಾಜ ಹೋತನಹಳ್ಳಿ, ಮಂಜುನಾಥ ಬಡಿಗೇರ, ಮಂಜುನಾಥ ಮೊರಬದ, ಡಾ. ಜ್ಯೋತಿ ಕಂಬಾಳಿಮಠ, ರಶ್ಮಿ ಖುರ್ಷಾಪುರ, ಅಬ್ದುಲ್​ಮಜೀದ್ ಸೌದಾಗರ್, ಪರಶುರಾಮ ಹೀರೂಲಾಲ, ರಮೇಶ ಹಿರಗಪ್ಪನವರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net