ಸಮಾಜ ಸೇವಕರಿಗೆ ಸನ್ಮಾನ

19 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಪವನ ಸಮೂಹ ಸಂಸ್ಥೆಗಳ ಅಧ್ಯಕ್ಷ ಶಂಕರಗೌಡ ಪಾಟೀಲ ಜನ್ಮದಿನ ನಿಮಿತ್ತ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಅನಾವರಣ ದಿನ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಸಮಾಜ ಸೇವಕರಿಗೆ ಸನ್ಮಾನಿಸಲಾಯಿತು.
ಸಮಾಜ ಸೇವಕರಾದ ಪ್ರಭಾಕರ್​ ದೇಶಪಾಂಡೆ, ಸೌರಭ ಕಮ್ಮಾರ, ಮಾಳವಿಕಾ ಕಡಕೋಳ, ಸೋಮಶೇಖರ ಚೆನ್ನಶೆಟ್ಟಿ, ಯಲ್ಲಪ್ಪ ಜೋಡಳ್ಳಿ ಹಾಗೂ ಕೆಲ ಪಾಲಕರಿಗೆ ಸನ್ಮಾನಿಸಲಾಯಿತು.
ನಿವೃತ್ತ ಮುಖ್ಯ ಅಭಿಯಂತರ ಎಸ್​.ಎಂ.ಪಾಟೀಲ ಮಾತನಾಡಿ, ಸಂಸ್ಥೆಯ ಸಮಾಜ ಸೇವಕರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಅವರು ಮತ್ತಷ್ಟು ಸೇವೆ ಮಾಡುವಂತೆ ಪ್ರೇರೇಪಿಸುತ್ತಿರುವ ಕಾರ್ಯ ಶ್ಲಾನೀಯ ಎಂದರು.
ಬಸವರಾಜ ಮೊಕಾಶಿ, ಬಸವರಾಜ ಕಾಡಪ್ಪನವರ, ಪವನ ಸಮೂಹ ಸಂಸ್ಥೆ ಉಪಾಧ್ಯಕ್ಷೆ ರತ್ನ ಪಾಟೀಲ, ಕಾರ್ಯದರ್ಶಿ ಮಹೇಶ ಪಾಟೀಲ, ಸಿಇಒ ಅಕ್ಷತಾ ಪಾಟೀಲ, ಪ್ರಾಚಾರ್ಯ ವಿಕ್ರಂ ಮಹಾಶಬ್ದೆ, ಪ್ರವಿಣಾ ಬ್ಯಾಹಟ್ಟಿ, ಶಾಲಾ ಮುಖ್ಯ ಸಂಯೋಜಕಿ ಸವಿತಾ ಕಂಬಿ , ಇತರರು ಇದ್ದರು.
ಅನಾವರಣ ದಿನದ ವಿಶೇಷತೆಯನ್ನು ನವೀನ ನರಗುಂದ ಪ್ರಸ್ತುತಪಡಿಸಿದರು. ಕಾವ್ಯ ಮಠದ ಹಾಗೂ ಶ್ವೇತಾ ಬದಾಮಿ ನಿರೂಪಿಸಿದರು. ಸುಜಾತಾ ಮೊಕಾಶಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net