ಸೆಸ್ಟೋ ಬಾಲ್ ಆಟಗಾರರಿಗೆ ಗೌರವ ಸಲ್ಲಿಕೆ

19sunti01
ಶಾಹಿಲ್ ಉಸ್ಮಾನ್ ಮತ್ತು ಇರ್ಷಾದ್ ಮುಸ್ತಫಾ ಅವರನ್ನು ಸುಂಟಿಕೊಪ್ಪದಲ್ಲಿ ತೆರದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು.
Published on

ಸುಂಟಿಕೊಪ್ಪ: ಸೆಸ್ಟೋ ಬಾಲ್ ತಂಡದ ನಾಯಕ ಶಾಹಿಲ್ ಉಸ್ಮಾನ್ ಮತ್ತು ಆಟಗಾರ ಇರ್ಷಾದ್ ಮುಸ್ತಫಾ ಅವರನ್ನು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ, ವಿವಿಧ ಸಂಘ-ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.

ಸೆಸ್ಟೋ ಬಾಲ್‌ನ ಪುರುಷರ ತಂಡ ಇತ್ತೀಚೆಗೆ ಥೈಲ್ಯಾಂಡ್ ಹಾಗೂ ಶ್ರೀಲಂಕಾ ತಂಡಗಳ ವಿರುದ್ಧ ಜಯ ಗಳಿಸಿತ್ತು. ಈ ಹಿನ್ನೆಲೆಯಲ್ಲಿ ತವರಿಗೆ ಬಂದ ಶಾಹಿಲ್ ಉಸ್ಮಾನ್ ಮತ್ತು ಇರ್ಷಾದ್ ಮುಸ್ತಫಾ ಅವರನ್ನು ಇಲ್ಲಿನ ಅಯ್ಯಪ್ಪಸ್ವಾಮಿ ದೇವಾಲಯ ಬಳಿಯಿಂದ ತೆರೆದ ಜೀಪಿನಲ್ಲಿ ಕನ್ನಡ ವೃತ್ತದವರೆಗೆ ಮೆರವಣಿಗೆ ಮಾಡಲಾಯಿತು.

ಕನ್ನಡ ವೃತ್ತದ ಬಳಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನೀಲ್‌ಕುಮಾರ್, ಉಪಾಧ್ಯಕ್ಷೆ ಶಿವಮ್ಮ ಮಹೇಶ್ ಮಾಲಾರ್ಪಣೆ ಮಾಡುವ ಮೂಲಕ ಕ್ರೀಡಾಪಟ್ಟುಗಳ ಸಾಧನೆಯನ್ನು ಅಂಭಿನಂದಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಶಬೀರ್, ಆಲಿಕುಟ್ಟಿ, ವಾಹನ ಚಾಲಕರ ಸಂಘದ ಅಧ್ಯಕ್ಚ ಸುರೇಶ್, ಮಾಜಿ ಅಧ್ಯಕ್ಷರಾದ ಅಚ್ಚುಪ, ಬಿ.ಎಂ.ಪೂವಪ್ಪ, ಬಿಲ್ಲವ ಸಂಘದ ಬಿ.ಕೆ.ಮೋಹನ್, ಆಟೋ ಚಾಲಕರ ಸಂಘದ ಅಧ್ಯಕ್ಷ ಶರೀಫ್, ಸದಸ್ಯರು, ರಜನಿಕಾಂತ್ ಅಭಿಮಾನಿಗಳ ಸಂಘದ ಅಧ್ಯಕ್ಷ ಶಿವಮಣಿ, ಕೆ.ಎ.ಶರೀಫ್, ಲತೀಫ್, ಪುತ್ತುಪ್ಪ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net