ಯಕ್ಷಗಾನ ಕಲಾವಿದರ ಆಹ್ವಾನದೊಂದಿಗೆ ಕಲೆಗೆ ಗೌರವ

yakshagana
ಕಲಾಕ್ಷೇತ್ರ ಟ್ರಸ್ಟ್ ಕುಂದಾಪುರ ಇದರ ಕಚೇರಿಯಲ್ಲಿ ಇನಿದನಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.
Published on

ಕುಂದಾಪುರ: ಕಲಾಕ್ಷೇತ್ರ ಟ್ರಸ್ಟ್ ಮೂಲಕ ನಡೆಯುವ ಇನಿದನಿ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆಗೆ ಯಕ್ಷಗಾನ ಕಲಾವಿದನನ್ನು ಆಹ್ವಾನಿಸುವ ಮೂಲಕ ಯಕ್ಷಗಾನ ಕಲೆಗೆ ಗೌರವ ನೀಡಿದಂತಾಗಿದೆ ಎಂದು ಭಾಗವತ ರಾಘವೇಂದ್ರ ಮಯ್ಯ ಹಾಲಾಡಿ ಹೇಳಿದರು.

ಕಲಾಕ್ಷೇತ್ರ ಟ್ರಸ್ಟ್ ಕುಂದಾಪುರ ಕಚೇರಿಯಲ್ಲಿ ಜ.12ರಂದು ನಡೆಯುವ ಇನಿದನಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಗುರುವಾರ ಬಿಡುಗಡೆಗೊಳಿಸಿ ಮಾತಾಡಿದರು.

ಉದ್ಯಮಿ ಆದರ್ಶ ಶೆಟ್ಟಿ ಹಾಲಾಡಿ ಚಿತ್ರಿಕೆ ಬಿಡುಗಡೆಗೊಳಿಸಿದರು. ಎಚ್‌ಎಂಎಂ ಮತ್ತು ವಿಕೆಆರ್ ಶಾಲೆಗಳ ಪ್ತಾಂಶುಪಾಲೆ ಡಾ.ಚಿಂತನಾ ರಾಜೇಶ್, ಕಾರ್ಟೂನಿಸ್ಟ್ ಸತೀಶ್ ಅಚಾರ್ಯ ಉಪಸ್ಥಿತರಿದ್ದರು.

ರಾಜೇಶ್ ಕಾವೇರಿ ಸ್ವಾಗತಿಸಿ, ಕಲಾಕ್ಷೇತ್ರ ಟ್ರಸ್ಟ್ ಕುಂದಾಪುರ ಅಧ್ಯಕ್ಷ ಕಿಶೋರ್ ಕುಮಾರ್ ಬಿ. ಪ್ರಸ್ತಾವಿಸಿದರು. ಹೇಮಾ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಧರ್ ಸುವರ್ಣ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net