ಮನೆಗೊಂದು ಮರ ಶಾಲೆಗೊಂದು ವನ ಅಗತ್ಯ

A tree for a house, a forest for a school are necessary.
A tree for a house, a forest for a school are necessary.
Published on

ತೇರದಾಳ (ಗ್ರಾ) : ಭೂಮಿ ಮೇಲೆ ಗಿಡ, ಮರ, ಬಳ್ಳಿಗಳು ಸುರಕ್ಷಿತವಾಗಿದ್ದರೆ ಮಾತ್ರ ಜೀವರಾಶಿ ಬದುಕುಳಿಯಲು ಸಾಧ್ಯ. ಗಿಡಮರಗಳ ರಕ್ಷಣೆ ಮಾಡುವುದರೊಂದಿಗೆ ಪರಿಸರ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ವಲಯ ಮೇಲ್ವಿಚಾರಕ ಅರುಣ ಮುಕ್ಕಣ್ಣವರ ಹೇಳಿದರು.

ಸಮೀಪದ ಹಳಿಂಗಳಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಸಸಿ ನಾಟಿ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ನೆಡುತ್ತಿರುವ ಸಸಿಯನ್ನು ಬೆಳೆಸಬೇಕು. ಮನೆಗೊಂದು ಮರ ಶಾಲೆಗೊಂದು ವನ ಮಾಡಬೇಕು ಎಂದರು.

ಬಿ.ಆರ್. ಬಿರಾದಾರ, ಯು.ಎ. ಮುಂಚಾಲಕರ, ಚನ್ನಯ್ಯ ಹಿರೇಮಠ, ಎಸ್.ಬಿ. ಮಂಟೂರ, ಬಿ.ಆರ್. ಕೌಟಗೊಂಡ, ಎ.ಪಿ. ಗೋಗಿ, ಟಿ.ಬಿ. ನಂದಗಾವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net