

ಬಂಕಾಪುರ: ಪಟ್ಟಣದಿಂದ ಬೊಮ್ಮನಹಳ್ಳಿಗೆ ಹೋಗುವ ಮಾರ್ಗ ಮಧ್ಯೆಯ ಹಳೆಬಂಕಾಪುರ ಹತ್ತಿರ ಗುರುವಾರ ಬೀಸಿದ ಬಿರುಗಾಳಿಗೆ ರಸ್ತೆ ಪಕ್ಕದ ಮರ ಉರುಳಿದ್ದು ಸಂಚಾರ ಸಂಪೂರ್ಣ ಬಂದಾಗಿದೆ.
ಮರದ ಟೊಂಗೆಗಳು ಪಕ್ಕದಲ್ಲಿ ಹಾಯ್ದು ಹೋಗಿದ್ದ ಏತ ನೀರಾವರಿ ಯೋಜನೆಯ ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ರಸ್ತೆಯ ಮೇಲೆ ಮುರಿದು ಬಿದ್ದಿವೆ. ಇದರಿಂದ ಈ ಮಾರ್ಗವಾಗಿ ಸಂಚರಿಸುವ ಹಳೆಬಂಕಾಪುರ, ಹುಲಿಕಟ್ಟಿ, ಶಿಡ್ಲಾಪುರ, ಹೋತನಹಳ್ಳಿ, ಬೊಮ್ಮನಹಳ್ಳಿಗೆ ಹೋಗುವ ಪ್ರಯಾಣಿಕರು ವಾಹನ ಸವಾರರು ಅನ್ಯ ಮಾರ್ಗಗಳ ಮೂಲಕ ಸಂಚರಿಸುವಂತಾಗಿದೆ. ಪಟ್ಟಣದ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದ್ದು, ರೈತರಲ್ಲಿ ಹರ್ಷ ತಂದಿದೆ. ಆದರೆ, ರೈತರು ಕೆರೆ, ಕಟ್ಟೆಗಳಿಗೆ ನೀರು ಬರುವಂತಹ ಬಾರಿ ಮಳೆಯ ನಿರೀಕ್ಷೆಯಲ್ಲಿದ್ದಾರೆ.