ನಗರಸಭೆ ಸದಸ್ಯೆ ಮನೆ ಮೇಲೆ ಉರುಳಿದ ಮರ

22sgr4
ಸಾಗರದಲ್ಲಿ ಮರ ಬಿದ್ದು ಹಾನಿಯಾಗಿರುವುದನ್ನು ಪಲ್ಲವಿ ಸಾತೇನಹಳ್ಳಿ ಪರಿಶೀಲಿಸಿದರು. ಮಧುಮಾಲತಿ, ಎನ್.ಲಲಿತಮ್ಮ, ಎಚ್.ಕೆ.ನಾಗಪ್ಪ ಇತರರಿದ್ದರು.
Published on

ಸಾಗರ: ನಗರದ ಗಂಗಾಪರಮೇಶ್ವರಿ ದೇವಸ್ಥಾನ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಬೃಹತ್ ಗಾತ್ರದ ಬಸರಿ ಮರವೊಂದು ಬಿದ್ದ ಪರಿಣಾಮ ಒಂದು ಓಮ್ನಿ, ಎರಡು ಕಾರು, ಒಂದು ಬೈಕ್ ಪೂರ್ಣ ಜಖಂಗೊಂಡಿದ್ದು ಮೂರು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಮರ ಬಿದ್ದ ರಭಸಕ್ಕೆ ನಗರಸಭೆ ಸದಸ್ಯೆ ಮಧುಮಾಲತಿ ಅವರ ಆರ್‌ಸಿಸಿ ಮನೆಯ ಮೇಲ್ಛಾವಣಿಗೂ ಹಾನಿಯಾಗಿದ್ದು ಪಕ್ಕದಲ್ಲಿದ್ದ ಸುನೀಲ್‌ಕುಮಾರ್ ಎಂಬುವವರ ಮನೆಗೆ ದೊಡ್ಡ ಪ್ರಮಾಣದ ಹಾನಿಯಾಗಿದೆ. ಪ್ರಸಾದ್ ಎಂಬುವವರ ಹೆಂಚಿನ ಮನೆಯ ಮೇಲೆ ಮರ ಬಿದ್ದ ಪರಿಣಾಮ ಮನೆಯೊಳಗಿದ್ದ ಟಿವಿ, ಇತರ ವಸ್ತುಗಳು ಸಂಪೂರ್ಣ ನಾಶವಾಗಿದೆ. ಎರಡು ವಿದ್ಯುತ್ ಕಂಬ ಮುರಿದು ಬಿದ್ದಿದ್ದು ಗಂಗಾಪರಮೇಶ್ವರಿ ದೇವಸ್ಥಾನ ರಸ್ತೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಅದೃಷ್ಟವಶಾತ್ ಯಾರಿಗೂ ಹಾನಿಯುಂಟಾಗಿಲ್ಲ. ತಡರಾತ್ರಿ ನಗರಸಭೆ ಸದಸ್ಯರಾದ ಮಧುಮಾಲತಿ, ಸೈಯದ್ ಜಾಕೀರ್, ಸಹಾಯಕ ಕಾರ್ಯಪಾಲಕ ಅಭಿಯಂತ ಎಚ್.ಕೆ.ನಾಗಪ್ಪ, ಸೇರಿದಂತೆ ನಗರಸಭೆ, ಅರಣ್ಯ ಇಲಾಖೆ ಸಿಬ್ಬಂದಿ ಮರವನ್ನು ತೆರವುಗೊಳಿಸುವ ಕೆಲಸ ಮಾಡಿದರು. ಶನಿವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು. ನಗರಸಭೆ ಸದಸ್ಯೆ ಎನ್.ಲಲಿತಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net