ರಾತ್ರಿ ಮನೆ ಮೇಲೆ ಬಿದ್ದ ಮರ

Damaged house due to tree fall.
Published on

ಕುಮಟಾ: ತಾಲೂಕಿನ ಅಳಕೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಡಳ್ಳಿಯ ಮತ್ತಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ಗಾಳಿ ಮಳೆಗೆ ಚಂದ್ರಕಾಂತ ಪಟಗಾರ ಎಂಬುವವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ.

ಮರ ಬಿದ್ದ ಹೊಡೆತಕ್ಕೆ ಛಾವಣಿಯ ಪಕಾಸುಗಳ ಸಹಿತ ಸಿಮೆಂಟ್ ತಗಡುಗಳು ಮುರಿದು ಸಂಪೂರ್ಣ ಹಾನಿಯಾಗಿದೆ.

ಇದರಿಂದ ಮನೆಯೊಳಗೆ ನೀರು ತುಂಬಿ ಸಾಮಾನು ಸರಂಜಾಮುಗಳು ಒದ್ದೆಯಾಗಿದೆ. ಮನೆಯಲ್ಲಿದ್ದವರಿಗೆ ಅದೃಷ್ಟವಶಾತ್ ಪೆಟ್ಟಾಗಿಲ್ಲ.

ಘಟನಾ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಸ್ಥಳೀಯ ನಿಕಟಪೂರ್ವ ಜಿ.ಪಂ. ಸದಸ್ಯ ಗಜಾನನ ಪೈ ಆಗಮಿಸಿ, ತುರ್ತು ಕ್ರಮ ಕೈಗೊಂಡರು.

ಈ ಕುರಿತು ಶಾಸಕರೊಂದಿಗೆ ರ್ಚಚಿಸಿ ಹೆಚ್ಚಿನ ಪರಿಹಾರದ ಭರವಸೆ ನೀಡಿದರು. ಗ್ರಾಮ ಪಂಚಾಯಿತಿ ಸದಸ್ಯ ದೇವು ಗೌಡ, ಪಿಡಿಒ, ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net