

ಯಲ್ಲಾಪುರ: ಮಳೆ-ಗಾಳಿಯ ಪರಿಣಾಮ ಮನೆಯ ಮೇಲೆ ಮರ ಬಿದ್ದು ಹಾನಿಯಾದ ಘಟನೆ ಪಟ್ಟಣದ ಗೋಪಾಲಕೃಷ್ಣ ಗಲ್ಲಿಯಲ್ಲಿ ಸೋಮವಾರ ನಡೆದಿದೆ.
ಗೋಪಾಲಕೃಷ್ಣ ಗಲ್ಲಿಯ ಉಲ್ಲಾಸ ಬಾಂದೇಕರ ಎನ್ನುವವರ ಮನೆಯ ಮೇಲೆ ತೆಂಗಿನಮರ ಬಿದ್ದು ಹಾನಿ ಉಂಟಾಗಿದೆ. ಪಕ್ಕದ ಪ್ಲಾಟಿನವರಿಗೆ ಸೇರಿದ ತೆಂಗಿನಮರ ಬಿದ್ದು, ಮನೆಯ ಹೆಂಚು ಒಡೆದಿದ್ದು, ಗೋಡೆ ಬಿದ್ದು ಜಖಂ ಆಗಿದೆ. ಸ್ಥಳಕ್ಕೆ ಪಪಂ ಸದಸ್ಯ ಆದಿತ್ಯ ಗುಡಿಗಾರ, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದ್ದಾರೆ.