ಮನೆ ಮೇಲೆ ಮರ ಬಿದ್ದು ಹಾನಿ

HNR MARA
Published on

ಹೊನ್ನಾವರ: ತಾಲೂಕಿನಲ್ಲಿ ನಿರಂತರ ಮಳೆ ಮುಂದುವರಿದಿದೆ. ಧಾರಾಕಾರವಾಗಿ ಸುರಿದ ಗಾಳಿ-ಮಳೆಗೆ ಬುಧವಾರ ತಾಲೂಕಿನ ವಿವಿಧೆಡೆ ಹಾನಿ ಸಂಭವಿಸಿದೆ.

ಹಳದಿಪುರ ಗ್ರಾಮದ ಬಗ್ರಾಣಿಯ ಕೃಷ್ಣ ದೇವು ಗೌಡ ಅವರ ಮನೆಯ ಮೇಲೆ ಬೃಹದಾಕಾರದ ಆಲದ ಮರ ಬಿದ್ದು ನಾಲ್ವರು ಗಾಯಗೊಂಡಿದ್ದಾರೆ. ಕೃಷ್ಣ ದೇವು ಗೌಡ, ಮಾದೇವಿ ಕೃಷ್ಣ ಗೌಡ, ನಿಪುಲಾ ಕೃಷ್ಣ ಗೌಡ, ವಿಷ್ಣು ಕೃಷ್ಣ ಗೌಡ ಗಂಭೀರ ಗಾಯಗೊಂಡಿದ್ದಾರೆ. ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುದ್ರಿಗಿ ಗ್ರಾಮದ ನಾಗೇಶ ಅಚ್ಯುತ ನಾಯ್ಕ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದಿದ್ದು ಭಾಗಶಃ ಹಾನಿಯಾಗಿದೆ. ಖರ್ವಾ ಗ್ರಾಮ ಕಡೆಗೇರಿಯ ವೆಂಕಟೇಶ ನಾರಾಯಣ ನಾಯ್ಕ ತೋಟದ 15 ಅಡಕೆ ಮರ ಹಾಗೂ ಎರಡು ತೆಂಗಿನ ಮರಗಳು ಹಾನಿಗೀಡಾಗಿವೆ. ಕರ್ಕಿ ಗ್ರಾಮದ ಪಾವಿನಕುರ್ವಾದಲ್ಲಿ ಮಾದೇವಿ ಲಕ್ಷ್ಮಣ ಮೇಸ್ತ ಅವರ ಮನೆಯ ಮೇಲೆ ತೆಂಗಿನಮರ ಬಿದ್ದು ಭಾಗಶಃ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟ ನೀಡಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net