ಹೆದ್ದಾರಿಗೆ ಬಿದ್ದ ಮರ, ವಿದ್ಯುತ್ ಕಂಬ

TKE bus
ರಾಂಪುರ ಬಳಿ ರಾಜ್ಯ ಹೆದ್ದಾರಿಗೆ ಮರ ಬಿದ್ದು ಸಂಚಾರ ಸ್ಥಗಿತಗೊಂಡಿತ್ತು.
Published on

ತರೀಕೆರೆ: ತಾಲೂಕಿನೆಲ್ಲೆಡೆ ಭರ್ಜರಿ ಮಳೆಯಾಗಿದೆ. ಗುರುವಾರದಿಂದ ಶುಕ್ರವಾರ ಬೆಳಗ್ಗೆ 8 ಗಂಟೆವರೆಗೆ ತರೀಕೆರೆಯಲ್ಲಿ 37.2 ಮಿ.ಮೀ, ಲಕ್ಕವಳ್ಳಿಯಲ್ಲಿ 43, ರಂಗೇನಹಳ್ಳಿಯಲ್ಲಿ 49.4, ಹುಣಸಘಟ್ಟ 43, ಲಿಂಗದಹಳ್ಳಿ 36.4, ತ್ಯಾಗದಬಾಗಿ 41.8, ತಣಿಗೇಬೈಲು 33, ಉಡೇವಾ 26.5 ಮಿ.ಮೀ ಮಳೆಯಾಗಿದೆ.

ಗಾಳಿ, ಮಳೆಯಿಂದ ರಾಂಪುರ ಬಳಿ ಬಾಗಲಕೋಟೆ-ಬಿಳಿಗಿರಿ ರಂಗನಬೆಟ್ಟ ರಾಜ್ಯ ಹೆದ್ದಾರಿಯಲ್ಲಿ ವಿದ್ಯುತ್ ಕಂಬದ ಮೇಲೆ ಮರ ಬಿದ್ದಿದ್ದರಿಂದ ಲಕ್ಕವಳ್ಳಿ ಕ್ರಾಸ್ ಮೂಲಕ ಭದ್ರಾವತಿ, ಶಿವಮೊಗ್ಗ, ಎನ್.ಆರ್.ಪುರ ಕಡೆ ತೆರಳುವ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ದುಗ್ಲಾಪುರ, ಸೀತಾಪುರ ಕಾವಲು, ಪಿರಮೇನಹಳ್ಳಿ, ಕಟ್ಟೇಹೊಳೆ, ಬೇಲೇನಹಳ್ಳಿ ತಾಂಡಾ, ಲಕ್ಕೇನಹಳ್ಳಿ ಮತ್ತಿತರ ಕಡೆ ಸಂಜೆವರೆಗೂ ವಿದ್ಯುತ್ ವ್ಯತ್ಯಯವಾಗಿತ್ತು. ಮೆಸ್ಕಾಂ ಹಾಗೂ ಅರಣ್ಯ ಸಿಬ್ಬಂದಿ ಮರ ತೆರವುಗೊಳಿಸಿದರು. ಹಲವು ಗ್ರಾಮಗಳಲ್ಲಿ ಐದಾರು ವಿದ್ಯುತ್ ಕಂಬಗಳು ನೆಲಕಚ್ಚಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net