

ಕೋಟ: ಸಾಸ್ತಾನದ ಪಾಂಡೇಶ್ವರ ರಸ್ತೆಯಲ್ಲಿ ಸಂಚಾರಿಸುತ್ತಿದ್ದ ಕ್ರೈನ್ ಮತ್ತು ವಿದ್ಯುತ್ ಕಂಬದ ಮೇಲೆ ಬೃಹತ್ ಮರ ಬಿದ್ದು ರಸ್ತೆ ಸಂಚಾರ ಕೆಲ ತಾಸುಗಳ ಕಾಲ ಅಸ್ತವ್ಯಸ್ತಗೊಂಡಿತು.
ಬೆಣ್ಣೆ ಕುದ್ರುವಿನಲ್ಲಿ ನಡೆಯುತ್ತಿರುವ ಡ್ಯಾಮ್ ಕಾಮಗಾರಿ ಮುಗಿಸಿ ಹಿಂತಿರುಗುತ್ತಿದ್ದ ಕ್ರೈನ್ ಮೇಲೆ ಮರ ಬಿದ್ದ ಪರಿಣಾಮವಾಗಿ ಕ್ರೈನ್ ಜಖಂಗೊಂಡು ವಿದ್ಯುತ್ ಲೈನ್ ಕೂಡ ಕಂಬ ಬಿರುಕು ಕಾಣಿಸಿಕೊಂಡಿದೆ, ಶಾಲೆಗೆ ಹೋಗುವ ಬಸ್ಗಳಿಗೆ ಮರ ಬಿದ್ದಿರುವುದರಿಂದ ಒಂದೆರಡು ಗಂಟೆ ವಿಳಂಬವಾಯಿತು. ಈ ವೇಳೆ ಸಾಸ್ತಾನ ಮೆಸ್ಕಾಂ ನೌಕರರು ಮತ್ತು ಗ್ರಾಪಂ ಸದಸ್ಯರು, ಸಾರ್ವಜನಿಕರು ಮರ ತೆರವು ಮಾಡಿ ರಸ್ತೆ ಸಂಚಾರ ಸುಗಮಗೊಳಿಸಿದರು.