

ಬಣಕಲ್: ಬಣಕಲ್ ಹಾಗೂ ಸುತ್ತಮುತ್ತ ಧಾರಾಕಾರ ಮಳೆಯಾಗಿದ್ದು ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ ಮರ ಬಿದ್ದು ಶನಿವಾರ ಸಂಜೆ ಕೆಲ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಮೇಗೂರಿನಲ್ಲಿ ಮನೆ ಕುಸಿದಿದೆ.
ಚಾರ್ಮಾಡಿ ಘಾಟ್‌ನ ಅಣ್ಣಪ್ಪ ಸ್ವಾಮಿ ದೇವಸ್ಥಾನದ ಸಮೀಪ ಹೆದ್ದಾರಿ ತಡೆಗೋಡೆ ಕುಸಿದಿದೆ. ಸೋಮನಕಾಡು ಕಣಿವೆ ಪ್ರಪಾತದ ಬಳಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಉರುಳಿದೆ. ಚಾರ್ಮಾಡಿ ಘಾಟ್‌ನ 8ನೇ ತಿರುವಿನಲ್ಲಿ ಹೆದ್ದಾರಿಗೆ 3 ಮರಗಳು ಬಿದ್ದು ಮೂರು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು. 2 ಕಿಮೀ ಉದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸಮಾಜ ಸೇವಕ ಹಸನಬ್ಬ ಚಾರ್ಮಾಡಿ ಹಾಗೂ ಬಣಕಲ್‌ನ ಮೊಹಮ್ಮದ್ ಆರ್ೀ ತಂಡ, ಸ್ಥಳೀಯರು, ಪೊಲೀಸ್ ಮತ್ತು ಅರಣ್ಯ ಸಿಬ್ಬಂದಿ ಮರವನ್ನು ತೆರವುಗೊಳಿಸಿದರು.
ಬಾಳೂರು ಹೋಬಳಿಯ ಮೇಗೂರು ಗ್ರಾಮದ ರಾಮಯ್ಯ ಎಂಬುವರ ಮನೆ ಮಳೆಗೆ ಕುಸಿದಿದೆ. ಗ್ರಾಪಂ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲಿಸಿದರು. ಕೊಟ್ಟಿಗೆಹಾರದಲ್ಲಿ ಗುರುವಾರದಿಂದ ಶನಿವಾರದವರೆಗೆ 164.2 ಮಿ.ಮೀ ಮಳೆ ದಾಖಲಾಗಿದ್ದು