

ಸಿದ್ದಾಪುರ: ತಾಲೂಕಿನಾದ್ಯಂತ ಮಳೆ-ಗಾಳಿ ಜೋರಾಗಿದ್ದು ಕಾನಸೂರಿನ ನಾಗರಾಜ ದುರ್ಗಪ್ಪ ನಾಯ್ಕ ಅವರ ವಾಸ್ತವ್ಯದ ಮನೆಗೆ ಹೊಂದಿಕೊಂಡಿರುವ ಹಿಟ್ಟಿನ ಗಿರಣಿಯ ಮೇಲೆ ಮರ ಬಿದ್ದು ಅಂದಾಜು 10 ಸಾವಿರ ರೂ.ಗಳಷ್ಟು ಹಾಗೂ ಹಲಗೇರಿ ಗ್ರಾಪಂ ವ್ಯಾಪ್ತಿಯ ಜೋಗಿನಮಠದ ಮಾಣಿ ಜಟ್ಯ ನಾಯ್ಕ ಅವರ ವಾಸ್ತವ್ಯದ ಮನೆಯ ಹಿಂಬದಿಗೆ ಮರ ಬಿದ್ದು 10 ಸಾವಿರ ರೂ.ಗಳಷ್ಟು ಹಾನಿ ಸಂಭವಿಸಿದೆ.
ಚುರುಕುಗೊಂಡ ಮಳೆ: ತಾಲೂಕಿನಾದ್ಯಂತ ಕಳೆದ ಒಂದು ವಾರದಿಂದ ಮಳೆ ಚುರುಕುಗೊಂಡಿದೆ. ಮಂಗಳವಾರದಿಂದ ಮಳೆಯೊಂದಿಗೆ ಗಾಳಿಯೂ ಜೋರಾಗಿದೆ. ಮಳೆ-ಗಾಳಿಯಿಂದಾಗಿ ವಿದ್ಯುತ್ ಸಂಪರ್ಕವೂ ಆಗಾಗ ಕೈಕೊಡುತ್ತ ಗ್ರಾಹಕರಿಗೆ ಕಿರಿ ಕಿರಿ ಉಂಟು ಮಾಡುತ್ತಿದೆ. ತಾಲೂಕಿನಲ್ಲಿ ಮಂಗಳವಾರ ಬೆಳಗ್ಗೆಯಿಂದ ಬುಧವಾರ ಬೆಳಗ್ಗೆಯವರೆಗೆ 79.8 ಮಿಮೀ ಮಳೆ ಬಿದ್ದು ದಾಖಲಾಗಿದೆ. ಇಲ್ಲಿಯವರೆಗೆ ಈ ವರ್ಷ 791.6 ಮಿಮೀ ಮಳೆ ಬಿದ್ದಂತಾಗಿದೆ.