

ಸೊರಬ: ತಾಲೂಕಿನಾದ್ಯಂತ ಬುಧವಾರ ಮಳೆ ಚುರುಕುಗೊಂಡಿದ್ದು ಗಾಳಿ ಮಳೆಗೆ ಮರಗಳು ವಿದ್ಯತ್ ಕಂಬಗಳು ಧರೆಗೆ ಉರುಳಿವೆ. ತಾಲೂಕಿನ ಹಾಲಗಳಲೆ ಬಳಿ ಸೊರಬ-ಸಾಗರ ರಸ್ತೆಯಲ್ಲಿ ಮರ ಬಿದ್ದು 2 ವಿದ್ಯುತ್ ಕಂಬಗಳು ತುಂಡಾಗಿ ರಸ್ತೆಗೆ ಉರುಳಿವೆ. ಕೆಲಸಮಯ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದ್ದು ಗಾಮಸ್ಥರಾದ ಯಶವಂತ, ವಿನಯ್, ಚನ್ನಪ್ಪ ಸೇರಿದಂತೆ ಇತರರು ಮರವನ್ನು ತರೆವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಸ್ಥಳಕ್ಕೆ ಎಇಇ ಸತ್ಯಪ್ರಕಾಶ್, ಉಳವಿ ಎಸ್‌ಒ ಪ್ರವೀಣ್ ಹಾಗೂ ಲೈನ್‌ಮನ್ ಮೌನೇಶ್ ಭೇಟಿ ನೀಡಿ ಪರಿಶೀಲಿಸಿದರು. ಹಾಲಗಳಲೆ, ಹೆಗ್ಗೋಡು, ಚಿಮಣೂರು, ಪುರ, ಕುಂಭತ್ತಿ, ಕುಳುವಳ್ಳಿ, ಶಿಗ್ಗಾ ಇಂಡುವಳ್ಳಿ ಗ್ರಾಮಗಳಿಗೆ ವಿದ್ಯುತ್ ಪೂರೈಕೆ ವ್ಯತ್ಯಯವಾಗಿದೆ.