ರಸ್ತೆಗೆ ಅಡ್ಡವಾಗಿ ಬಿದ್ದ ಮರ, ಸಂಚಾರ ಸ್ಥಗಿತ

22HNL3 TREE
Published on

ಹಾನಗಲ್ಲ: ಹಾನಗಲ್ಲ-ಬಂಕಾಪುರ ಮಾರ್ಗ ಮಧ್ಯೆ ಇನಾಂದ್ಯಾಮನಕೊಪ್ಪ ಗ್ರಾಮದ ಬಳಿ ಸೋಮವಾರ ಬೆಳಗ್ಗೆ ಬೃಹತ್ ಆಲದ ಮರವೊಂದು ರಸ್ತೆಗೆ ಅಡ್ಡವಾಗಿ ಬಿದ್ದ ಪರಿಣಾಮ ಕೆಲ ತಾಸು ರಸ್ತೆ ಸಂಚಾರ ಸ್ಥಗಿತಗೊಂಡ ಘಟನೆ ನಡೆಯಿತು.

ಎರಡ್ಮೂರು ದಿನಗಳಿಂದ ಆಗಾಗ ಸರಿಯುತ್ತಿರುವ ಮಳೆ ಮತ್ತು ಜೋರಾಗಿ ಬೀಸುವ ಗಾಳಿಗೆ ಹಳೆಯ ಹಾಗೂ ಬೃಹತ್ ಗಾತ್ರದ ಆಲದ ಮರವು ನೆಲಕ್ಕುರುಳಿದೆ. ಮಧ್ಯಾಹ್ನ ಮರ ಕಡಿದು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net