ಆಗುಂಬೆ ಘಾಟಿ ರಸ್ತೆಗೆ ಬಿದ್ದ ಮರದ ಕೊಂಬೆ

22 tth 01
ಆಗುಂಬೆ ಘಾಟಿಯ ರಸ್ತೆಗೆ ಬಿದ್ದಿರುವ ಮರದ ಕೊಂಬೆ.
Published on

ತೀರ್ಥಹಳ್ಳಿ: ಆಗುಂಬೆ ಘಾಟಿಯ 5ನೇ ತಿರುವಿನಲ್ಲಿ ಭಾರಿ ಗಾತ್ರದ ಮರದ ಕೊಂಬೆಯೊಂದು ಶುಕ್ರವಾರ ಬೆಳಗ್ಗೆ ರಸ್ತೆಗೆ ಬಿದ್ದ ಪರಿಣಾಮ ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ವನ್ಯಜೀವಿ ವಿಭಾಗದವರು ಮರದ ಕೊಂಬೆಯನ್ನು ಕಡಿದು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಘಾಟಿ ಮಾರ್ಗದಲ್ಲಿ ಆಗಾಗ್ಗೆ ಮರಗಳು ಬೀಳುವುದು ಸಾಮಾನ್ಯವಾಗಿದ್ದು ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಅದರಲ್ಲೂ ಮುಖ್ಯವಾಗಿ ಆಂಬುಲೆನ್ಸ್‌ಗಳಿಗೆ ಅಡಚಣೆಯಾಗುತ್ತಿದೆ. ಮಳೆಗಾಲದ ಸಂಧರ್ಭದಲ್ಲಂತೂ ಇಂತಹ ಅಡಚಣೆಗಳು ಸಾಮಾನ್ಯವಾಗಿದೆ. ಮುಕ್ತ ಸಂಚಾರ ವ್ಯವಸ್ಥೆಯನ್ನು ಮಾಡಬೇಕಾದ ಹೆದ್ದಾರಿ ಪ್ರಾಧಿಕಾರದವರು ಈ ಕಡೆ ಗಮನ ಹರಿಸುತ್ತಿಲ್ಲ. ಇಂತಹ ಸಮಸ್ಯೆಯಿಂದ ಪ್ರಯಾಣಿಕರು ಗಂಟೆಗಳ ಕಾಲ ಮಾರ್ಗಮಧ್ಯೆ ಕಾಯಬೇಕಾದ ಅನಿವಾರ್ಯತೆ ಎದುರಾಗುತ್ತಿದೆ ಎಂದು ಸಾರ್ವಜನಿಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಮುಖ್ಯವಾಗಿ ಅಪಾಯಕಾರಿಯಾಗಿ ರಸ್ತೆಗೆ ಬಾಗಿರುವ ಮರದ ಕೊಂಬೆಗಳನ್ನು ಹಾಗೂ ರಸ್ತೆಗೆ ಬಿದ್ದ ಮರಗಳನ್ನು ಕಡಿದ ನಂತರ ವಾಹನ ಸಂಚಾರಕ್ಕೆ ಅಡಚಣೆ ಆಗದಂತೆ ಮರದ ತುಂಡುಗಳನ್ನು ರಸ್ತೆಯ ಬದಿಯಲ್ಲೇ ಹಾಕದೆ ಅವುಗಳನ್ನು ಪೂರ್ಣವಾಗಿ ತೆರವುಗೊಳಿಸುವುದೂ ಅಗತ್ಯ ಎಂಬ ಆಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net