ಹುಣಸೂರಿನಲ್ಲಿ ಬಿರುಗಾಳಿಗೆ ಧರೆಗುರುಳಿದ ಮರ

HUN-MAY-3-6(TREE DAMAGED AT HARVE RAMENHALLI)
ಹುಣಸೂರು ತಾಲೂಕು ಹರವೆ ರಾಮೇನಹಳ್ಳಿಯಲ್ಲಿ ಬಿರುಗಾಳಿಗೆ ಸಿಕ್ಕು ಮರವೊಂದು ಬಿದ್ದಿದ್ದು, ಪಕ್ಕದಲ್ಲಿದ್ದ ವಿದ್ಯುತ ಕಂಬವೂ ತುಂಡಾಗಿ ಬಿದ್ದಿದೆ.
Published on

ಹುಣಸೂರು: ತಾಲೂಕಿನಾದ್ಯಂತ ಶುಕ್ರವಾರ ಸಂಜೆ ಗುಡುಗು, ಸಿಡಿಲು ಮತ್ತು ಬಿರುಗಾಳಿಯೊಂದಿಗೆ ಭರ್ಜರಿ ಮಳೆಯಾಗಿದ್ದು, ಬೆಂಕಿಯುಂಡೆಯಂತಾಗಿದ್ದ ಭೂಮಿ ತಂಪಾಗುವ ಮೂಲಕ ಸಾರ್ವಜನಿಕರು ನಿಟ್ಟುಸಿರು ಬಿಟ್ಟರು.

ಶುಕ್ರವಾರ ಸಂಜೆ 4.30ರ ಸುಮಾರಿಗೆ ಭರ್ಜರಿ ಗುಡುಗು ಸಿಡಿಲಿನೊಂದಿಗೆ ಆರಂಭಗೊಂಡ ಮಳೆ ಸತತ ಎರಡು ಗಂಟೆಗಳವರೆಗೆ ಸುರಿಯಿತು. ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಹರವೇ ರಾಮೇನಹಳ್ಳಿಯಲ್ಲಿ ಬಲವಾದ ಬಿರುಗಾಳಿಗೆ ಮರವೊಂದು ನೆಲಕ್ಕಪ್ಪಳಿಸಿದೆ. ಮರದೊಂದಿಗೆ ಪಕ್ಕದಲ್ಲಿದ್ದ ವಿದ್ಯುತ್ ಕಂಬವೂ ಬಿದ್ದಿದೆ.

ಗ್ರಾಮದ ಅಶೋಕ ಎಂಬುವರ ಮನೆಯ ಕಲ್ನಾರ್ ಶೀಟ್ ಹಾರಿಹೋಗಿದೆ. ಹೋಬಳಿ ವ್ಯಾಪ್ತಿಯ ಕಾಳೇಗೌಡನಕೊಪ್ಪಲು, ಹೊಸೂರು, ಜಡಗನಕೊಪ್ಪಲು, ಮರದೂರು, ಕೆಬ್ಬೆಕೊಪ್ಪಲು, ಹಗರನಹಳ್ಳಿ, ಮಂಟಿಕೊಪ್ಪಲು ಗ್ರಾಮಗಳಲ್ಲಿ ಭರ್ಜರಿ ಮಳೆಯಾಗಿದೆ. ಗಾವಡಗೆರೆ ಮತ್ತು ಹನಗೋಡು ಹೋಬಳಿ ವ್ಯಾಪ್ತಿಯಲ್ಲೂ ಭರ್ಜರಿ ಮಳೆಯಾದ ವರದಿಯಾಗಿದೆ. ಹುಣಸೂರು ನಗರಾದ್ಯಂತ ಮಳೆ ಬಿದ್ದು ವಾತಾವರಣ ತಂಪಾದ ಕಾರಣ ನಾಗರಿಕರು ಸಮಾಧಾನದ ನಿಟ್ಟುಸಿರು ಬಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net