ಕಾರ್ಕಳದಲ್ಲಿ ಪ್ರವಾಸ ಕಥನ ಮಾಲಿಕೆ

jagruti
ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆ ಪ್ರವಾಸ ಕಥನ ಮಾಲಿಕೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆ ಅಧ್ಯಕ್ಷೆ ಮಿತಪ್ರಭಾ ಹೆಗ್ಡೆ, ಕಾರ್ಯದರ್ಶಿ ಮಾಲತಿ ಜಿ.ಪೈ, ಡಾ.ಸುಮತಿ ಪಿ. ಉಪಸ್ಥಿತರಿದ್ದರು
Published on

ಕಾರ್ಕಳ: ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆ ಕಾರ್ಕಳ ತಿಂಗಳ ಕಾರ್ಯಕ್ರಮದಲ್ಲಿ ಪ್ರವಾಸ ಕಥನ ಮಾಲಿಕೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಹಿರಿಯ ಸದಸ್ಯೆ ಶ್ಯಾಮಲಾ ಗೋಪಿನಾಥ್, ಸಾವಿತ್ರಿ ಮನೋಹರ್, ಸುಲೋಚನಾ ತಿಲಕ್ ಮತ್ತು ಇಂದಿರಾ ಅವರು ತಾವು ಕೈಗೊಂಡ ಕಾಶ್ಮೀರ, ಅಂಡಮಾನ್, ದುಬೈ ಮತ್ತು ಲಂಡನ್ ಪ್ರವಾಸದ ಅನುಭವ ಹಂಚಿಕೊಂಡರು. ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆ ಅಧ್ಯಕ್ಷೆ ಮಿತಪ್ರಭಾ ಹೆಗ್ಡೆ ಸ್ವಾಗತಿಸಿದರು. ಕಾರ್ಯದರ್ಶಿ ಮಾಲತಿ ಜಿ.ಪೈ ಕಾರ್ಯಕ್ರಮ ನಿರೂಪಿಸಿದರು. ಡಾ.ಸುಮತಿ ಪಿ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net