

ಮೈಸೂರು: ಮೈಸೂರಿನ ಹೇರ್ ಆ್ಯಂಡ್ ಬ್ಯೂಟಿ ಅಸೋಸಿಯೇಷನ್ ವತಿಯಿಂದ ಸೆ.30 ರಂದು ನಗರದ ಹೋಟೆಲ್ ಕಿಂಗ್ಸ್ ಕೋರ್ಟ್‌ನಲ್ಲಿ ಮಧ್ಯಾಹ್ನ 2 ರಿಂದ ಸಂಜೆ 6ರವರೆಗೆ ತೃತೀಯ ಲಿಂಗಿಗಳ ಫ್ಯಾಷನ್ ಷೋ ಹಾಗೂ ರಾಜ್ಯ ಮಟ್ಟದ ಬ್ರೈಡ್ ಆ್ಯಂಡ್ ಕ್ರಿಯೇಟಿವ್ ಮೇಕಪ್ ಸ್ಪರ್ಧೆ ಆಯೋಜಿಸಲಾಗಿದೆ.
ತೃತೀಯ ಲಿಂಗಿಗಳಲ್ಲಿರುವ ಪ್ರತಿಭೆ ಹೊರತರುವ ಉದ್ದೇಶದಿಂದ ಇಂತಹ ಷೋ ಆಯೋಜಿಸಲಾಗುತ್ತಿದೆ.
ಅಂದು ನಡೆಯಲಿರುವ ಆಡಿಷನ್‌ನಲ್ಲಿ ರಾಜ್ಯದ ಯಾವುದೇ ಭಾಗದ ತೃತೀಯ ಲಿಂಗಿಗಳು ಭಾಗವಹಿಸಬಹುದು ಎಂದು ಸಂಸ್ಥೆಯ ಅಧ್ಯಕ್ಷೆ ಉಮಾ ಜಾದವ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈಗಾಗಲೇ ಹುಬ್ಬಳ್ಳಿ ಸೇರಿದಂತೆ ಕೆಲವು ಭಾಗದಲ್ಲಿ ಆಡಿಷನ್ ನಡೆದಿದ್ದು, ಆಡಿಷನ್‌ನಲ್ಲಿ ಭಾಗವಹಿಸಿ ಆಯ್ಕೆಯಾದವರಿಗೆ ಅ.28ರಂದು ಚಿಕ್ಕಮಗಳೂರಿನಲ್ಲಿ ಗ್ರಾೃಂಡ್ ಫಿನಾಲೆ ನಡೆಯಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರಾದ ಅರ್ಪಣಾ, ಸಂಗೀತಾ, ಐರಾ, ಗಾಯತ್ರಿ, ಪ್ರಣತಿ ಪ್ರಕಾಶ್, ದೀಪು ಶಾಸ್ತ ಇದ್ದರು.