ನಿಮ್ಹಾನ್ಸ್​ನಲ್ಲಿದೆ ಟ್ರೇನಿ ಹುದ್ದೆ: ಮಾಸಿಕ 40 ಸಾವಿರ ರೂ. ವೇತನ

nimhans
Published on

ಬೆಂಗಳೂರು: ಇಲ್ಲಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯಲ್ಲಿ (ನಿಮ್ಹಾನ್ಸ್​) ಟ್ರೇನಿ ಕೋ-ಆರ್ಡಿನೇಟರ್​ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಯಿಂದ ಅರ್ಜಿ ಆಹ್ವಾನಿಸಲಾಗಿದೆ.

ಎಂಬಿಬಿಎಸ್​/ಎಂಡಿ/ಎಂಎಸ್ಸಿ ಪದವಿ ಪಡೆದಿದ್ದು, ವೃತ್ತಿ ಅನುಭವ ಇರುವವರಿಗೆ ಆದ್ಯತೆ ನೀಡಲಾಗಿದೆ. 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಮಾಸಿಕ ವೇತನ 40,000 ರೂ. ಇದೆ. ಆಸಕ್ತರು ಏಪ್ರಿಲ್​ 18ರೊಳಗೆ ಸಂಸ್ಥೆಯ ಅಧಿಕೃತ ವೆಬ್​ಸೈಟ್​ನಲ್ಲಿ ಅರ್ಜಿ ಸಲ್ಲಿಸಬಹುದು.

ಅಧಿಸೂಚನೆಗೆ: https://bit.ly/3ut03tz

ಮಾಹಿತಿಗೆ: https://nimhans.ac.in/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net