

ಚಿಂತಾಮಣಿ: ಕೊಳವೆ ಬಾವಿಗಳ ಕೇಬಲ್, ಪಂಪ್ ಮೋಟಾರ್ಗಳನ್ನು ಕದಿಯುತ್ತಿದ್ದ ಕಳ್ಳರು ಇದೀಗ ಬಟ್ಲಹಳ್ಳಿ ಠಾಣಾ ವ್ಯಾಪ್ತಿಯ ಎಸಗಲಹಳ್ಳಿಯಲ್ಲಿ ಟ್ರ್ಯಾಕ್ಟರ್ ಟ್ರಾಲಿ ಕದ್ದಿದ್ದಾರೆ.
ಗ್ರಾಮದ ರೈತ ಶ್ರೀರಾಮಪ್ಪ ಎಂಬವರು ಇತ್ತೀಚೆಗಷ್ಟೇ ಖರೀದಿಸಿದ್ದ ಟ್ರಾಲಿಯನ್ನು ಮನೆಯ ಸಮೀಪದ ಮರದ ಕೆಳಗೆ ನೆರಳಿನಲ್ಲಿ ನಿಲ್ಲಿಸಿದ್ದರು. ಆದರೆ ಶುಕ್ರವಾರ ರಾತ್ರೋರಾತ್ರಿ ಕಳ್ಳರು ಟ್ರಾಲಿಯನ್ನು ಕದ್ದಿದ್ದಾರೆ. ಮತ್ತೊಂದು ಟ್ರ್ಯಾಕ್ಟರ್ ಇಂಜಿನ್ ತಂದು ಟ್ರಾಲಿ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದ್ದು, ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.